ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ
ಮಂಗಳೂರು: ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸಲು ಹೆಚ್ಚಿನ ಸ್ಥಳಾವಕಾಶ ಬೇಕಾಗುವುದು ಮತ್ತು ಹೆಚ್ಚು ವೆಚ್ಚ ತಗಲುವುದೆಂಬ ಆತಂಕ ಗ್ರಾಹಕರಲ್ಲಿ/ಗುತ್ತಿಗೆದಾರರಲ್ಲಿರುವುದು ಕಂಡು ಬಂದಿರುವುದಾಗಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಸ್ಪಷ್ಟೀಕರಣ ನೀಡಿದೆ.
ಕ.ವಿ.ನಿ. ಆಯೋಗದ ಆದೇಶದಂತೆ ಕರ್ನಾಟಕದಾತ್ಯಂತ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಸ್ಥಾವರಗಳಿಗೆ (ನೀರಾವರಿ ಪಂಪ್ಸೆಟ್ ಹೊರತುಪಡಿಸಿ) ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಅದರಂತೆ ಮೆಸ್ಕಾಂನಲ್ಲಿಯೂ 01-01-2026 ಮತ್ತು ನಂತರ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಸ್ಥಾವರಗಳಿಗೂ, ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವುದಕ್ಕೆ ಆದೇಶ ನೀಡಲಾಗಿದೆ.
ಸ್ಮಾರ್ಟ್ ಮೀಟರ್‌ಗಳನ್ನು ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಸ್ಥಾವರಗಳಿಗೆ ಮಾತ್ರ ಅಳವಡಿಸುತ್ತಿರುವುದರಿಂದ, ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸಲು ಪ್ರತ್ಯೇಕವಾಗಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ಅಗತ್ಯ ಇರುವುದಿಲ್ಲ, ಮತ್ತು 01-01-2026 ಮತ್ತು ನಂತರ ಸ್ಮಾರ್ಟ್ ಮೀಟರನ್ನು ಅಳವಡಿಸಲು ಪ್ರಾರಂಭಿಸಿರುವರಿಂದ, ಸಾಕಷ್ಟು ಸಮಯಾವಕಾಶ ನೀಡಿದಂತಾಗಿದೆ. ಹಾಲಿ ಇರುವ ವಿದ್ಯುತ್ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸುವುದು ಕಡ್ಡಾಯವಲ್ಲ. ಆದುದರಿಂದ ಗ್ರಾಹಕರು ಮತ್ತು ಗುತ್ತಿಗೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.