ಎರಡು ವರ್ಷದ ಮಗು ಪತ್ತೆ

ಎರಡು ವರ್ಷದ ಮಗು ಪತ್ತೆ

ಮಂಗಳೂರು: ನಗರದ ಬೈಕಂಪಾಡಿ ರಿಕ್ಷಾ ನಿಲ್ದಾಣದ ಬಳಿ ಜು.7 ರಂದು ಅಂದಾಜು 2 ವರ್ಷದ ಗಂಡು ಮಗು ಪತ್ತೆಯಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ  ನಗರದ ಬೋಂದೆಲ್ ಕೃಷ್ಣ ನಗರ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ದಾಖಲಿಸಲಾಗಿದೆ. 

ಈ ಮಗುವಿನ ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ (ದೂರವಾಣಿ ಸಂಖ್ಯೆ:0824-2440004) ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article