ಡ್ರಗ್ಸ್ ಸೇವನೆ: ಬಸ್ ಕಂಡಕ್ಟರ್‌ಗಳ ಸೆರೆ
Tuesday, December 16, 2025
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಸೇರಿದ ಹಲವು ಸ್ಥಳಗಳಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಸ್ಟೇಟ್‌ಬ್ಯಾಂಕ್ ಬಸ್‌ನಿಲ್ದಾಣ ಸಮೀಪ ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌ಗಳಾಗಿ ಕೆಲಸಮಾಡುವ ಇಬ್ಬರು ವ್ಯಕ್ತಿಗಳು ಸೇರಿದಂತೆ ಒಟ್ಟು ಮೂವರು ವ್ಯಕ್ತಿಗಳನ್ನು ಮಾದಕದ್ರವ್ಯ ಸೇವನೆ ಮಾಡುವ ಸಂದರ್ಭದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ಅಬಕಾರಿ ಉಪವಿಭಾಗ-1 ರ ಉಪ ಅಧೀಕ್ಷಕಿ ಗಾಯತ್ರಿ ಮಾರ್ಗದರ್ಶನದಲ್ಲಿ, ನಿರೀಕ್ಷಕ ಮ್ಯಾಥ್ಯು ಕಾರ್ಲೋ ಹಾಗೂ ಉಪನಿರೀಕ್ಷಕ ಸುರೇಂದ್ರ ದಾಳಿಯಲ್ಲಿ ಭಾಗವಹಿಸಿದ್ದರು.