ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹ
ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು ಮತ್ತು ಒಂದು ವರ್ಷ ಕಾಲ ಹಳೆಯ ರೈಲ್ವೇ ಗೇಟ್ ಮುಚ್ಚದಂತೆ ಸರ್ಕಾರವನ್ನು ಒತ್ತಾಯಿಸಿ ಗುರುವಾರ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಜಪ್ಪು ಮಹಾಕಾಳಿ ಪಡ್ಪು ಪ್ರದೇಶವು ಮಂಗಳೂರಿನ ಪ್ರಮುಖ ನಗರ ಪ್ರದೇಶಗಳಲ್ಲೊಂದಾಗಿದ್ದು, ಸಾವಿರಾರು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಕೇರಳ, ಮುಡಿಪು, ಕೊಣಾಜೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಮಂಗಳೂರು ನಗರಕ್ಕೆ ಆಗಮಿಸುವ ಜನರು ಪಂಪ್‌ವೆಲ್ ಮಾರ್ಗದ ಬದಲು ಜಪ್ಪು ಮಹಾಕಾಳಿ ಪಡ್ಪು ಬೈಪಾಸ್ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ ಎಂದರು.
ಈ ಮಾರ್ಗದಲ್ಲಿ ದಿನಕ್ಕೆ 50ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದು, ಪ್ರತೀ ಬಾರಿ ರೈಲ್ವೇ ಗೇಟ್ ಮುಚ್ಚಿದಾಗ ಸಾರ್ವಜನಿಕರ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಈ ರಸ್ತೆಯನ್ನು ಬಳಸುವ ತುರ್ತು ವಾಹನಗಳಾದ ಆಗ್ನಿಶಾಮಕ ವಾಹನಗಳು, ಆಂಬುಲೆನ್ಸ್, ಪೋಲಿಸ್ ವಾಹನಗಳು, ಸಾವಿರಾರು ಪ್ರಯಾಣಿಕರು, ಶಾಲಾ ಮಕ್ಕಳು, ವೃದ್ಧರು ಹಾಗೂ ಹಿರಿಯ ನಾಗರಿಕರು ನಿರಂತರ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ತುಳುನಾಡ ರಕ್ಷಣಾ ವೇದಿಕೆ ಉಪಾಧ್ಯಕ್ಷ ಜೆ.ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಕೆ. ವಿವೇಕಾನಂದ ರಾವ್, ನಿರ್ಮಲ ನಗರ ಸಮಿತಿ ಮುಖಂಡ ಮೊಹಮ್ಮದ್ ಶೂಪಿ, ತುಳುನಾಡ ರಕ್ಷಣಾ ವೇದಿಕೆ ಜೊತೆ ಕಾರ್ಯದರ್ಶಿ ಜ್ಯೋತಿ ಜೈನ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಶಾರದಾ ಶೆಟ್ಟಿ, ಹಮೀದ್ ಹಸನ್ ಮಾಡೂರು,ಮುನೀರ್ ಮುಕ್ಕಚೇರಿ, ಅನಿಲ್ ಪೂಜಾರಿ, ವಿವೇಕ್ ರಾವ್, ನಗರ ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಜಪ್ಪಿನಮೊಗರು, ಆಸೀಫ್ ಜಪ್ಪು ಪಟ್ನ, ಆಶ್ರಫ್ ಕೋಟೆಕಾರು, ತುಳುನಾಡ ವೇದಿಕೆ ಜಪ್ಪು ಘಟಕ ಅಧ್ಯಕ್ಷ ರಾಜ್ ಗೋಪಾಲ್, ಅಶೋಕ್ , ಖಾದರ್, ಸುರೇಶ್ ಏರಾಡಿ, ಅನಂತ ಪದ್ಮನಾಭ ರಾವ್, ಬಾಬು ಸುವರ್ಣ, ಶರೀಫ್, ಕಮಲ್, ರಶೀದ್, ಆರೀಫ್, ಚಂದ್ರಹಾಸ್, ಸಮದ್, ಕಾಸಿಂ, ಸತೀಶ್ ಸಾಲಿಯಾನ್, ನಾಗೇಶ್ ಭಂಡಾರಿ, ಮುತ್ತಲಿಪ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.