ರಾಷ್ಟ್ರೀಯ ಹೆದ್ದಾರಿ 169 ರ ಸರ್ವಿಸ್ ರಸ್ತೆಗಳ ಅವೖಜ್ಞಾನಿಕ ಕಾಮಗಾರಿ: ಸ್ಥಳೀಯರ ಅನುಕೂಲಕ್ಕೆ ತಕ್ಕುದಾಗಿ ನಿರ್ಮಿಸುವಂತೆ ಹೋರಾಟ ಸಮಿತಿ ಮನವಿ
ಆದರೆ ವಾಮಂಜೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಸರ್ವಿಸ್ ರಸ್ತೆಗಳು ಈಗಾಗಲೇ ಇರುವ ಅಡ್ಡರಸ್ತೆಗಳ ಮತ್ತು ಪಿಡಬ್ಲ್ಯೂಡಿ ರಸ್ತೆಗಳ ಸಂಚಾರಕ್ಕೆ ತೊಡಕನ್ನು ಉಂಟು ಮಾಡುತ್ತಿವೆ. ಹೆದ್ದಾರಿಗಳ ಅಂತರಕ್ಕೆ ಸರ್ವಿಸ್ ರಸ್ತೆಗಳನ್ನು ಕೂಡ ಎತ್ತರಿಸಲಾಗುತ್ತಿದ್ದು ಇದರಿಂದ ಆಸುಪಾಸಿನ ಮನೆಗಳಿಗೆ ಅಂಗಡಿಗಳಿಗೆ ಸಂಚರಿಸುವ ಸಣ್ಣ ರಸ್ತೆಗಳು ಮುಚ್ಚಿ ಹೋಗುವ ಸ್ಥಿತಿಯನ್ನು ತಲುಪಿವೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆಗಳನ್ನು ಎತ್ತರಿಸಿರುವುದರಿಂದ ಅನೇಕ ಅಡ್ಡರಸ್ತೆಗಳಲ್ಲಿ ಕಡಿದಾದ ಇಳಿಜಾರುಗಳು ನಿರ್ಮಾಣವಾಗಿ ಪ್ರಯಾಣಿಕರು ಪರಿತಪಿಸುವಂತಾಗಿದೆ. ಇನ್ನು ಕೆಲವು ಅಡ್ಡರಸ್ತೆಗಳಂತೂ ಸರ್ವಿಸ್ ರಸ್ತೆಗಳನ್ನು ತಲುಪಲಾರದಷ್ಟು ಆಳದಲ್ಲಿದ್ದು ಮಣ್ಣಿನಿಂದ ಮುಚ್ಚಿ ಹೋಗಿವೆ.
ಈಗಾಗಲೇ ಹೆದ್ದಾರಿಗಾಗಿ ತೆರವುಗೊಳಿಸಿ ಅನತಿ ದೂರದಲ್ಲಿ ನಿಯಮದಂತೆ ನಿರ್ಮಾಣ ಮಾಡಿದ ಅಂಗಡಿ ಮುಂಗಟ್ಟುಗಳು ಸರ್ವಿಸ್ ರಸ್ತೆಗೆ ಹಾಕಿದ ಮಣ್ಣಿನಿಂದ ಮುಚ್ಚಿ ಹೋಗುವ ಸ್ಥಿತಿಯನ್ನು ತಲುಪಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಕುರಿತು ಗಮನಹರಿಸಿ 169 ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳನ್ನು ಜನಸಂಚಾರಕ್ಕೆ ಮುಕ್ತವಾಗಿ ಅನುವು ಮಾಡಿಕೊಡುವಂತೆ ರೂಪಿಸಬೇಕು.
ಸರ್ವಿಸ್ ರಸ್ತೆಗಳನ್ನು ನಿರ್ಮಿಸುವ ವೇಳೆ ಸ್ಥಳಿಯರಿಗೆ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿಸಬೇಕು. ಮತ್ತು ಸರ್ವಿಸ್ ರಸ್ತೆಗಳಿಂದ ವಾಮಂಜೂರಿನ ನಿತ್ಯದ ವ್ಯವಹಾರಗಳಿಗೆ ತೊಡಕ್ಕಾಗದಂತೆ ಸ್ಥಳೀಯರ ಅನುಕೂಲತೆಗೆ ತಕ್ಕಂತೆ ನಿರ್ಮಿಸಬೇಕು ಎಂಬ ಒತ್ತಾಯದೊಂದಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ರಾಷ್ಟ್ರೀಯ ಹೆದ್ದಾರಿ 169 ಅವೖಜ್ಞಾನಿಕ ಕಾಮಗಾರಿ ವಿರುದ್ಧದ ಹೋರಾಟ ಸಮಿತಿ ವಾಮಂಜೂರು ಇದರ ನೇತ್ರತ್ವದಲ್ಲಿ ಮನವಿಯನ್ನು ಸಲ್ಲಿಸಿದ್ದು ಹೋರಾಟ ಸಮಿತಿಯ ಮುಖಂಡರಾದ ರಾಜೇಶ್ ವಾಮಂಜೂರು, ದಿನಕರ್, ನಿತಿನ್ ಬಂಗೇರ,ಮನೋಜ್ ಕುಮಾರ್ ವಾಮಂಜೂರು, ಸ್ವಾತಿ ಎಸ್ ವಾಮಂಜೂರು ಮೊದಲಾದವರು ನಿಯೋಗದಲ್ಲಿದ್ದರು.