ಡಿ. 6ರಂದು ವನಜಾ ಜೋಶಿ ಅವರ ಗಜಲ್ ಸಂಕಲನ ಬಿಡುಗಡೆ, ಗಜಲ್ ರಚನಾ ಕಾರ್ಯಾಗಾರ
Wednesday, December 3, 2025
ಮೂಡುಬಿದಿರೆ: ಇಲ್ಲಿನ ರೋಟರಿ ಶಾಲೆಯ ಶಿಕ್ಷಕಿಯಾಗಿದ್ದ, ಪ್ರಸ್ತುತ ಉಜಿರೆಯಲ್ಲಿ ನೆಲೆಸಿರುವ ಶಿಕ್ಷಕಿ ವನಜಾ ಜೋಶಿ ಅವರ 'ನಕ್ಕು ಬಿಡು ಬಾನಕ್ಕಿ 'ಗಜಲ್ ಸಂಕಲನದ ಬಿಡುಗಡೆ ಮತ್ತು ಗಜಲ್ ರಚನಾ ಕಾರ್ಯಾಗಾರ ಡಿ. 6ರಂದು ಬೆ. ಗಂ. 9.30 ಕ್ಕೆ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಜರಗಲಿದೆ.
ದ.ಕ. ಕ.ಸಾ.ಪ. ಮತ್ತು ಎಸ್ ಡಿಎಂ ಉಜಿರೆ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ವಹಿಸಲಿದ್ದು ಉಜಿರೆ ಕಾಲೇಜಿನ ಪ್ರಾಚಾರ್ಯ ರೆ.ಫಾ.ಸಂತೋಷ್ ಆಲ್ಬರ್ಟ್ ಸಲ್ದಾನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಲಬುರ್ಗಿ ಎನ್.ಡಿ. ಕಾಲೇಜಿನ ಪ್ರಾಧ್ಯಾಪಕ, ಗಜಲ್ ಕವಿ ಡಾ. ಮಲ್ಲಿನಾಥ ಎನ್. ತಳವಾರ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಸಾಹಿತಿ ಸುಮನಾ ಆರ್. ಹೇರ್ಳೆ ಅವರುಕೃತಿ ಪರಿಚಯ ಮಾಡಿಕೊಡಲಿದ್ದಾರೆ.
ಕಸಾಪ ಬೆಳ್ತಂಗಡಿ ತಾ ಅಧ್ಯಕ್ಷ ಡಿ. ಯದುಪತಿ ಗೌಡ, ಕವಯಿತ್ರಿ ವನಜಾ ಜೋಶಿ ಉಪಸ್ಥಿತರಿರುತ್ತಾರೆ.
