ಇರುವೈಲಿನಲ್ಲಿ 76ನೇ ವರ್ಷದ ನಗರ ಭಜನೆಗೆ ಚಾಲನೆ
Tuesday, December 16, 2025
ಮೂಡುಬಿದಿರೆ: ಶ್ರೀ ಕ್ಷೇತ್ರ ಇರುವೈಲಿನ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 76 ನೇ ವರ್ಷದ ನಗರ ಭಜನೆ ಸೋಮವಾರ ಸಂಜೆ ಆರಂಭಗೊಂಡಿತು.
ದೇಗುಲದ ಪ್ರಧಾನ ಅರ್ಚಕ ಐ ರಾಘವೇಂದ್ರ ಆಸ್ರಣ್ಣ ಅವರು ಪೂಜಾ ವಿಧಿವಿಧಾನಗಳೊಂದಿಗೆ ನಗರ ಭಜನೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ.ಜೆ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಕಾರ್ಯದರ್ಶಿ ನಾರಾಯಣ ದೇವಾಡಿಗ, ಕೋಶಾಧಿಕಾರಿ ಪ್ರಭಾಕರ ಆಚಾರ್ಯ, ಕೆಡಿಪಿ ಸದಸ್ಯ ಪ್ರವೀಣ್ ಪೂಜಾರಿ, ಹೊಸಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪೂವಪ್ಪ ಸಾಲ್ಯಾನ್, ಶುಭಕರ ಕಾಜವ, ಮೋಹನ್ ನಾಯಕ್ ಪಂಜ, ಶಿವಾನಂದ ನಾಯ್ಕ್ ಕಟ್ಟಣಿಗೆ, ಪ್ರದೀಪ್ ಶೆಟ್ಟಿ, ಭಜಕರು ಹಾಗೂ ಭಕ್ತಾದಿಗಳು ಈ ಸಂದಭ೯ದಲ್ಲಿದ್ದರು.
