ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯೋವ೯ನನ್ನು ಸೆರೆ ಹಿಡಿದ ಮೂಡುಬಿದಿರೆ ಪೊಲೀಸರು

ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯೋವ೯ನನ್ನು ಸೆರೆ ಹಿಡಿದ ಮೂಡುಬಿದಿರೆ ಪೊಲೀಸರು


ಮೂಡುಬಿದಿರೆ: ಯಾವುದೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ ಸಹಿತ ಸಿಬಂದಿಗಳು ಸಿನಿಮೀಯ ಶೈಲಿಯಲ್ಲಿ ಕಾರೊಂದನ್ನು ಚೇಸ್ ಮಾಡಿ ತಡೆದು ನಿಲ್ಲಿಸಿ ಓವ೯ ವ್ಯಕ್ತಿಯನ್ನು  ವಶಕ್ಕೆ ಪಡೆದುಕೊಂಡ ಘಟನೆ ಕೊಡಂಗಲ್ಲಿನಲ್ಲಿ ಮಂಗಳವಾರ ಸಂಜೆ ನಡೆದಿದೆ. 


ಶಿತಾ೯ಡಿ ಕಡೆಯಿಂದ ಮೂಡುಬಿದಿರೆಗೆ ಬರುತ್ತಿದ್ದ ಕಾರು ಕೋಟೆಬಾಗಿಲು-ಮಹಾವೀರ ಕಾಲೇಜು ರಸ್ತೆಗೆ ಮೂಲಕ ಸಾಗುತ್ತಿದ್ದಾಗ ಕೊಡಂಗಲ್ಲು ಬಳಿ ಪೊಲೀಸ್ ವಾಹನವನ್ನು ನೋಡಿ ರಿವಸ್೯ ಚಲಾಯಿಸಿದಾಗ  ಇನ್ಸ್ ಪೆಕ್ಟರ್ ಸಂದೇಶ್ ಅವರು ಚೇಸ್ ಮಾಡಿದಾಗ ಕಾರು ಚರಂಡಿಗೆ ಇಳಿದು ಜಖಂಗೊಂಡು ನಿಂತಿದೆ.  ಚಾಲಕ ಕಾರಿನಿಂದ ಇಳಿಯದೆ ಇದ್ದದರಿಂದ ಇನ್ಸ್ ಪೆಕ್ಟರ್ ಅವರು ಕಾರಿಗೆ ಟ್ರೀಟ್ಮೆಂಟ್ ಮಾಡಿ ಹೊರಗೆ ಬರುವಂತೆ ಮಾಡಿ ಸ್ಟೇಷನ್ ಗೆ ಎಳೆದುಕೊಂಡು ಬಂದು ವಿಚಾರಣೆ ಆರಂಭಿಸಿದ್ದಾರೆ. 

 ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article