ಕಲ್ಲಮುಂಡ್ಕೂರು ಶ್ರೀನಾರಾಯಣಗುರು ಮೂರ್ತಿ ಪ್ರತಿಷ್ಠಾಪನಾ ಉತ್ಸವ: ಭಜನಾ ಮಂಗಳೋತ್ಸವ
Saturday, December 13, 2025
ಮೂಡುಬಿದಿರೆ: ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಮುಂಡ್ಕೂರು ಆಶ್ರಯದಲ್ಲಿ ವಾರದ ನಗರ ಭಜನಾ ಸಂಕೀರ್ತನ, ಶ್ರೀ ನಾರಾಯಣ ಗುರು ಮೂರ್ತಿ ಪ್ರತಿಷ್ಠಾಪನೆ, ಮಂಗಳೋತ್ಸವ ಕಾರ್ಯಕ್ರಮಗಳು ನೆರವೇರಿದವು.
ಶಿಕ್ಷಣ ಕ್ಷೇತ್ರದಲ್ಲಿ 41 ವರ್ಷಗಳ ಕಾಲ ಅತ್ಯುತ್ತಮ ಸೇವೆಗೈದ ವಿಜಯಾ ಕಾಮತ್ ಅವರನ್ನು ಸಂಘವು ಸನ್ಮಾನಿಸಿತು. ಸಂಘದ ಆರಾಧನಾ ಪರಂಪರೆಯನ್ನು ನಿರಂತರ ಭಜನಾ ಸೇವೆಯೊಂದಿಗೆ ನಡೆಸಿಕೊಡುತ್ತಿರುವ ವಾಧಿರಾಜ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ, ಯುವ ಸಾಧಕರನ್ನು ಗೌರವಿಸಲಾಯಿತು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂದೀಪ್ ಸಾಲ್ಯಾನ್, ಗೌರವ ಅಧ್ಯಕ್ಷ ಸದಾನಂದ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ವಿನಯ್ ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಅಮೀನ್ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮೋಹನ್ ದಾಸ್, ಗೌರವ ಅಧ್ಯಕ್ಷೆ ಗೀತಾ ಕೋಟ್ಯಾನ್, ಕಾರ್ಯದರ್ಶಿ ಛಾಯಾ, ಯುವ ಘಟಕದ ಅಧ್ಯಕ್ಷ ಮನೋಜ್ ಪೂಜಾರಿ, ಕಾರ್ಯದರ್ಶಿ ದಯೇಶ್ ಅಮೀನ್, ಭಜನಾ ಮುಖ್ಯಸ್ಥರಾದ ಗಣೇಶ್ ಅದ್ದೋಟ್ಟು, ಜಾನು ಪೂಜಾರಿ ಉಪಸ್ಥಿತರಿದ್ದರು.