ಕಲ್ಲಬೆಟ್ಟುವಿನಲ್ಲಿ 58ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಕಲ್ಲಬೆಟ್ಟುವಿನಲ್ಲಿ 58ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ


ಮೂಡುಬಿದಿರೆ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ಇದರ ವತಿಯಿಂದ 58ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಕಲ್ಲಬೆಟ್ಟು ಸತ್ಯನಾರಾಯಣ ಕಟ್ಟೆಯಲ್ಲಿ ಜರಗಿತು. 

ಗುರುಪುರ ಜಂಗಮ ಸಂಸ್ಥಾನ ಮಠದ  ಶ್ರೀ  ರುದ್ರಮುನಿ ಮಹಾಸ್ವಾಮಿ ಅವರು ಧಾಮಿ೯ಕ ಕಾಯ೯ಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯಿಂದ ಜನರಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚಾಗುವುದು ಹಾಗೂ ನೆಮ್ಮದಿಯ ಬದುಕಿಗೆ ಪೂರಕವಾಗುವುದು. 

ಜರ್ಮನಿ ದೇಶದಲ್ಲಿ ಸಂಸ್ಕೃತಕ್ಕೆ ಸರಕಾರ ಬಹಳಷ್ಟು ಒತ್ತು ಕೊಟ್ಟಿರುತ್ತದೆ. ಅದರಂತೆ ಭಾರತದ ಪ್ರಾಚೀನ ಭಾಷೆ ಸಂಸ್ಕೃತವನ್ನು ಉಳಿಸಲು ಮತ್ತು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಪಠ್ಯ-ಪುಸ್ತಕದಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಸರಕಾರ ಗಮನ ಹರಿಸಬೇಕು ಎಂದು ತಿಳಿಸಿದರು. 

ಕಲ್ಲಬೆಟ್ಟು ನ್ಯೂವೈಬ್ರೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್ ವೆಂಕಟೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 58 ವರ್ಷಗಳಿಂದ ನಿರಂತರವಾಗಿ ನಡೆಯುವ ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸುವ ಪದಾಧಿಕಾರಿಗಳ ಬಗ್ಗೆ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. 

ಸನ್ಮಾನ: ಹಿರಿಯ ಪೂಜಾ ಸಮಿತಿಯ ಸದಸ್ಯರಾದ ಕೆ ರಮೇಶ್ ರೈ ತೆಂಕಬೆಟ್ಟುಗುತ್ತು ಮತ್ತು ದೈವಾರಾಧನೆ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2025 ಪುರಸ್ಕೃತ ಗೋಪಾಲ್ ಕೋಟ್ಯಾನ್ ಮಾರೂರು ಅವರನ್ನು ಶಾಲು-ಹಾರ, ಫಲ-ಪುಷ್ಪ ಸ್ಮರಣಿಕೆ ಹಾಗೂ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು. 

ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಾದ ತ್ರಿಶಾ ಸತೀಶ್ ಶೆಟ್ಟಿ, ಕೆ ಸುಮಾ ಪಿ ಪೈ, ಪ್ರಮುಖ ತುಳುಕುಳೆ ಇವರನ್ನು ಸನ್ಮಾನಿಸಲಾಯಿತು.                

ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಮಾ ಪಿ ಪೈ  ವಂದೇ ಮಾತರಂ ಹಾಡಿದರು. ಗಣೇಶ್ ಪೈ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪಿ.ರಮೇಶ್ ಚಂದ್ರ ವರದಿ ವಾಚಿಸಿದರು. ಖಜಾಂಚಿ ಕೆ. ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಧನ್ಯವಾದವಿತ್ತರು. 

ಸಭಾ ಕಾರ್ಯಕ್ರಮದ ನಂತರ ಚಲನಚಿತ್ರ ನಟ, ಪ್ರಶಾಂತ್ ಸಿ.ಕೆ ವಿರಚಿತ ಶ್ರೀ ಕ್ಷೇತ್ರ ಹಿರಿಯಡಕ ಮೇಳದವರಿಂದ “ಮೈಮೆದ ಮಲರಾಯೆ” ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article