ಮೂಡುಬಿದಿರೆ ಮಹಾವೀರ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ
ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ ಉದ್ಘಾಟಿಸಿ, “ಶಿಬಿರವು ವಿದ್ಯಾರ್ಥಿಗಳಿಗೆ ಈ ಗ್ರಾಮೀಣ ಪ್ರದೇಶದಲ್ಲಿ 1 ವಾರ ಎಲ್ಲರೊಂದಿಗೆ ಒಡನಾಡಲು ಅವಕಾಶ ದೊರೆತಿದೆ. ಊರಿನ ಜನರೊಂದಿಗೆ ಬೆರೆತು ಈ ಶಿಬಿರ ಯಶಸ್ವಿಯಾಗಲಿ ಎಂದರು.
ದ.ಕ. ಹಾಲು ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ ಮಾತನಾಡಿ, “ಶಿಕ್ಷಣದೊಂದಿಗೆ ರಾಷ್ಟ್ರೀಯ ಪ್ರಜ್ಞೆ, ಸಾಮರಸ್ಯ, ಸಾಮೂದಾಯಕ ಭಾವನೆಯನ್ನು ಬೆಳೆಸುವಲ್ಲಿ ಎನ್.ಎಸ್.ಎಸ್. ಸಹಕಾರಿ. ದೇಶದ ಆರೋಗ್ಯಪೂರ್ಣ ಬೆಳವಣಿಗೆಗೆ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಅಪಾರ. ಸ್ಪಷ್ಟಗುರಿಯೆಡೆಗೆ ಸಾಗಬೇಕಾದ ಯುವ ಮನಸ್ಸು ನೀವಾಗಾಬೇಕು” ಎಂಬುದಾಗಿ ಶುಭ ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರಜೈನ್, ಅಧ್ಯಕ್ಷತೆ ವಹಿಸಿ, “7 ದಿನಗಳ ಅಮೂಲ್ಯ ಸಮಯವನ್ನು ಒಬ್ಬರಿಗೊಬ್ಬರು ಸಹಕರಿಸುತ್ತಾ ಸುಂದರವಾಗಿ ಕಳೆಯಿರಿ, ಸಮಯವನ್ನು ಉತ್ತಮವಾಗಿ ಬೆಳೆಸಿಕೊಳ್ಳಿ”ಎಂದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ನಿಡ್ಡೋಡಿ, ಕಲ್ಲಮುಂಡ್ಕೂರು ಅದ್ಯಕ್ಷ ಲ.ಸಂದೀಪ್ ಸುವರ್ಣ, ಲ.ಯಶವಂತ್ ಆಚಾರ್ಯ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ವಿದ್ಯಾರ್ಥಿ ನಾಯಕಿ ಸಾಕ್ಷಿ ಹೆಚ್. ಶೆಟ್ಟಿ, ಎನ್.ಎಸ್.ಎಸ್. ಘಟಕ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶಾರದಾ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಗೌರಿ ವಂದಿಸಿ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು.
