ವಿಕಲಚೇತನರಿಗೆ ವಿಶೇಷ ಆದ್ಯತೆಯಲ್ಲಿ ಸವಲತ್ತುಗಳು ಸಿಗಬೇಕು: ಮುರಳೀಧರ ನಾಯ್ಕ್
Friday, December 19, 2025
ಆದಶ೯ ಸಂಸ್ಥೆಯ ರಜತ ಮಹೋತ್ಸವ
ಮೂಡುಬಿದಿರೆ: ವಿಶೇಷ ಚೇತನರಿಗಾಗಿ ಸರ್ಕಾರದಿಂದ ಹಲವಾರು ಯೋಜನೆಗಳಿವೆ. ಆದರೆ ಕೆಲವೊಂದು ನಿಯಮಗಳಿಂದಾಗಿ ಫಲಾನುಭವಿಗಳು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ವಿಕಲಚೇತನರಿಗೆ ವಿಶೇಷ ಆಧ್ಯತೆಯಲ್ಲಿ ಸವಲತ್ತುಗಳು ಸಿಗುವಂತ್ತಾಗಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಮುರಳೀಧರ ನಾಯ್ಕ್ ಹೇಳಿದರು.
ಅವರು ಇಲ್ಲಿನ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಸಮಾಜ ಮಂದಿರದಲ್ಲಿ ಶುಕ್ರವಾರ ನಡೆದ ವಿಶೇಷ ಚೇತನರ ಸಮಾವೇಶ ಹಾಗೂ ಕಲಾಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಸಮಾವೇಶ ಉದ್ಘಾಟಿಸಿ ಶುಭ ಹಾರೈಸಿದರು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ ಮುಖ್ಯ ಅತಿಥಿಯಾಗಿದ್ದರು.
ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗಿಸ್, ನಿರ್ದೇಶಕರಾದ ಇಮ್ಯಾನುವೆಲ್ ಮೋನಿಸ್, ಶೆರ್ಲಿ ಟಿ.ಬಾಬು ಉಪಸ್ಥಿತರಿದ್ದರು,
ಸಂಸ್ಥೆಯ ಕಾರ್ಯಕರ್ತರಾದ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ವಂದಿಸಿದರು.
ಉದ್ಘಾಟನೆಗೆ ಮೊದಲು ಸರ್ಕಾರಿ ಪ್ರಾಥಮಿಕ ಶಾಲೆ (ಲೇಬರ್ ಶಾಲೆ) ಬಳಿಯಿಂದ ಸಮಾಜಮಂದಿರದವರೆಗೆ ವಿಶೇಷಚೇತನರು, ಪೋಷಕರು, ಶಿಕ್ಷಕರ ಮೆರವಣಿಗೆ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಚೇತನರಿಗೆ ಕಲಾಮೇಳ, ರಂಗೋಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.









