ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಒಕ್ಕೂಟ ಪದಾಧಿಕಾರಿಗಳ ತರಬೇತಿ

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಒಕ್ಕೂಟ ಪದಾಧಿಕಾರಿಗಳ ತರಬೇತಿ


ಮೂಡುಬಿದಿರೆ: ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ತಾಲೂಕಿನ ಆಲಂಗಾರು ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾಯ೯ಕ್ರಮವು ಬನ್ನಡ್ಕ ರಾಘವೇಂದ್ರ ಮಠದ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

ತಾಲೂಕು ಯೋಜನಾಧಿಕಾರಿ ಧನಂಜಯ ಅವರು ದೀಪ ಬೆಳಗಿಸಿ ಮಾತನಾಡಿ, ಬ್ಯಾಂಕ್ ಮತ್ತು ಯೋಜನೆಯಲ್ಲಿ ಬದಲಾವಣೆಯಾದ ಯೋಜನೆಯ ಬಗ್ಗೆ, ಸಿಬಿಲ್, ಸಿಎಸ್ ಇ ಖಾತೆ ಬದಲಾವಣೆ, ಸಾಲ ಸೌಲಭ್ಯ ಮತ್ತು ಮಿತಿಯ ಬಗ್ಗೆ, ಹೊಸ ಸದಸ್ಯರ ಸೇಪ೯ಡೆ, ಭದ್ರತೆಗಳ ಬಗ್ಗೆ ಹಾಗೂ ಸಮಯಕ್ಕೆ ಸರಿಯಾಗಿ ಜೀವ ವಿಮೆ ಪಾಲಿಸಿಗಳನ್ನು ನವೀಕರಣಗೊಳಿಸುವಂತೆ ಮಾಹಿತಿ ನೀಡಿದರು.


ಒಕ್ಕೂಟದ ವಲಯ ಅಧ್ಯಕ್ಷ ಶಿವರಾಮ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಲೆಕ್ಕ ಪರಿಶೋಧಕ ನಾಗೇಶ್ ಹೆಗ್ಡೆ ಅವರು ಸಿಸಿ ಖಾತೆ, ಬ್ಯಾಂಕ್ ಬಡ್ಡಿ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ನೋಡೆಲ್ ಅಧಿಕಾರಿ ರತಿ ಅವರು ಸೇವಾ ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಪುರಸಭಾ ಸದಸ್ಯ, ಕೊಡಂಗಲ್ಲು ಒಕ್ಕೂಟದ ಉಪಾಧ್ಯಕ್ಷ ನವೀನ್ ಶೆಟ್ಟಿ, ಮೂಡುಕೊಣಾಜೆ ಒಕ್ಕೂಟದ ಅಧ್ಯಕ್ಷೆ, ಜನಜಾಗೃತಿ ವೇದಿಕೆಯ ಸದಸ್ಯೆ ಲತಾ ಹೆಗ್ಡೆ ಅನಿಸಿಕೆಯನ್ನು ಹಂಚಿಕೊಂಡರು.

ಅಮನಬೆಟ್ಟು ಒಕ್ಕೂಟದ ಅಧ್ಯಕ್ಷ ಸುರೇಂದ್ರ ಉಪಸ್ಥಿತರಿದ್ದರು.

ಕೊಡಂಗಲ್ಲು ಒಕ್ಕೂಟದ ಸೇವಾ ಪ್ರತಿನಿಧಿ ಮಮತಾ ಸ್ವಾಗತಿಸಿದರು. ಮೇಲ್ವಿಚಾರಕರಾದ ಚಂದ್ರಹಾಸ ಕಾಯ೯ಕ್ರಮ ನಿರೂಪಿಸಿ, ಸೇವಾಪ್ರತಿನಿಧಿ ಉಷಾಕಿರಣ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article