ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ: ಮಾಜಿ ಸಚಿವ ಅಭಯಚಂದ್ರ ಜೈನ್

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ: ಮಾಜಿ ಸಚಿವ ಅಭಯಚಂದ್ರ ಜೈನ್


ಮೂಡುಬಿದಿರೆ: ಒಂದು ಕಾಲದಲ್ಲಿ ಹೆಣ್ಣು ಕೇವಲ ಅಡಿಗೆ ಕೋಣೆಗೆ ಸೀಮಿತವಾಗಿದ್ದಳು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ, ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ನಂತರ ಹಾಗೂ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದ ನಂತರ ಹೆಣ್ಣು ಮಕ್ಕಳಿಗೆ ಶಕ್ತಿ ಬಂದಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.


ಅವರು ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಡುಬಿದಿರೆ ತಾಲೂಕು ಇದರ ವತಿಯಿಂದ ಜ್ಞಾನ ವಿಕಾಸ ಮಹಿಳಾ ಕಾಯ೯ಕ್ರಮದನ್ವಯ ಭಾನುವಾರ ಧವಲಾ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಿಚಾರಗೋಷ್ಠಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಹಿಂದೆ ಕಾಕ೯ಳ ತಾಲೂಕಿನಲ್ಲಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರವನ್ನು ಮೂಡುಬಿದಿರೆಗೆ ವಿಸ್ತರಿಸುವಂತೆ ತಾನು ಶಾಸಕನಾಗಿದ್ದ ಸಂದಭ೯ದಲ್ಲಿ ಹೆಗ್ಗಡೆಯವರ ಬಳಿ ಮನವಿ ಮಾಡಿದ್ದೆ ಈ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಶಕ್ತಿ ತುಂಬಲಾಗಿದ್ದು ಆ ಕಾರಣದಿಂದಲೇ ಇಂದು ಹೆಣ್ಣು ಮಕ್ಕಳು ಆದಾಯ ಗಳಿಸಲು, ರಾಜಕೀಯಕ್ಕೆ ಪ್ರವೇಶಿಸಲು ಹಾಗೂ ವೇದಿಕೆಗೆ ಬಂದು ಮಾತನಾಡಲು ಸಹಕಾರಿಯಾಗಿದೆ ಎಂದರು.


ದಿಗಂಬರ ಜೈನ ವಿದ್ಯಾವಧ೯ಕ ಸಂಘದ ಸಂಚಾಲಕ ಕೆ. ಹೇಮರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ಠಾಣೆಯ ಉಪ ನಿರೀಕ್ಷಕಿ ಪ್ರತಿಭಾ ಅವರು ಪೊಕ್ಸೋ ಕಾಯಿದೆ, ಸೈಬರ್ ಕ್ರೈಮ್, ಆನ್‌ಲೈನ್ ವಂಚನೆ, ಡಿಜಿಟಲ್ ಸ್ಕ್ಯಾಮ್ ಬಗ್ಗೆ ಜಾಗಖತರಾಗಿರುವಂತೆ ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲೆ ಪ್ರೊ. ಮಿತ್ರ ಪ್ರಭಾ ಹೆಗ್ಡೆ ‘ಸದೃಢ ಸಮಾಜ ನಿಮಾ೯ಣದಲ್ಲಿ ಮಹಿಳೆ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡಿದರು.

ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಯೋಜನೆಯ ದ.ಕ. ಜಿಲ್ಲಾ ನಿದೇ೯ಶಕ ದಿನೇಶ್ ಡಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಬಿ. ಧನಂಜಯ ಸ್ವಾಗತಿಸಿದರು. ಸಿಂಚನ ಜ್ಞಾನ ವಿಕಾಸ ಕೇಂದ್ರ ಕರಿಯನಂಗಡಿ ಇದರ ಸದಸ್ಯೆ ಪದ್ಮಾವತಿ, ಧನಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರ ಮೂಡುಕೊಣಾಜೆಯ ಸದಸ್ಯೆ ಲತಾ ಹೆಗ್ಡೆ ಅನಿಸಿಕೆಯನ್ನು ಹಂಚಿಕೊಂಡರು. ಲೆಕ್ಕ ಪರಿಶೋಧಕ ನಾಗೇಶ್ ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ವಂದಿಸಿದರು.

ನಂತರ ಜ್ಞಾನ ವಿಕಾಸ ಮಹಿಳಾ ತಂಡಗಳಿಂದ ಸಾಂಸ್ಕೃತಿಕ ಹಾಗೂ ಪುಷ್ಪಗುಚ್ಛ ಸ್ಪಧೆ೯ಗಳು ನಡೆದವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article