ಈಜು ಸ್ಪರ್ಧೆ: ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ದಿಗಂತ್ ವಿ.ಎಸ್.ಗೆ ರಾಷ್ಟ್ರಮಟ್ಟದ ಪ್ರಶಸ್ತಿ
Monday, December 8, 2025
ಪುತ್ತೂರು: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI), ಡೈರೆಕ್ಟೊರೇಟ್ ಆಫ್ ಎಜುಕೇಶನ್, GNCT ಆಫ್ ಡೆಲ್ಲಿ ಇದರ ಆಶ್ರಯದಲ್ಲಿ ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ನ.30 ರಿಂದ ಡಿ.5 ರವರೆಗೆ ನಡೆದ 69ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ 2025-26 ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ದಿಗಂತ್ ವಿ.ಎಸ್. 100ಮೀ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಇವರಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಸಿ ಮತ್ತು ಕ್ರಾಂತಿ ತೇಜ ತರಬೇತಿಯನ್ನು ನೀಡಿರುತ್ತಾರೆ. ಇವರು ಕೂರ್ನಡ್ಕ ನಿವಾಸಿ ವಿಶ್ವನಾಥ ಎಸ್. ಹಾಗೂ ವೀಣಾ ಕುಮಾರಿ ದಂಪತಿಗಳ ಪುತ್ರ.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.