ಅಡುಗೆ ಮಾಡುವುದು ಒಂದು ಕಲೆ: ಸುದರ್ಶನ್ ಭಟ್
Wednesday, December 3, 2025
ಮೂಡುಬಿದಿರೆ: ಅಡುಗೆ ಮಾಡುವುದು ಒಂದು ಅಪೂರ್ವ ಕಲೆ. ಭಾರತೀಯ ಆಹಾರ ಪದ್ಧತಿ ವಿದೇಶದಲ್ಲಿಯೂ ಮಾನ್ಯತೆ ಪಡೆದಿದೆ. ದೇಸಿ ಅಡುಗೆ ನಮ್ಮ ಆರೋಗ್ಯವನ್ನು ಸದೃಢವಾಗಿರುತ್ತದೆ. ಇಂದಿನ ಯುವಜನತೆ ದೇಸಿ ಅಡುಗೆ ನೀಡುವ ಪ್ರಯೋಜನವನ್ನು ಅರಿತುಕೊಂಡು, ಸಾಂಪ್ರದಾಯಿಕವಾಗಿ ಅಡುಗೆ ಮಾಡುವ ವಿಧಾನದ ಲಾಭವನ್ನು ಅರಿತುಕೊಂಡು ಆಹಾರ ಉದ್ಯಮದಲ್ಲಿ ಸೃಜನಾತ್ಮಕವಾಗಿ ತೊಡಗಿಕೊಳ್ಳುವುದು, ಪ್ರತಿಯೊಂದು ಆಹಾರಗಳ, ತರಕಾರಿಗಳ ಪ್ರಯೋಜನವನ್ನು ಅರಿತುಕೊಳ್ಳುವುದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಉಪಯೋಗವಾಗುತ್ತದೆ. ಎಂದು ಭಟ್ ಅಂಡ್ ಭಟ್ ಖ್ಯಾತಿಯ ಸುದರ್ಶನ್ ಭಟ್ ಬೆದ್ರಾಡಿ ಹೇಳಿದರು.
ಅವರು ಕಲ್ಲಬೆಟ್ಟು ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಬುಧವಾರ ನಡೆದ ಆಹಾರೋತ್ಸವ ಕಾರ್ಯಕ್ರಮದಲ್ಲಿ ಕಡೆಯುವ ಕಲ್ಲಿನಲ್ಲಿ ವ್ಯಂಜನಗಳನ್ನು ಹಾಕಿ ಕಡಿಯುವುದರೊಂದಿಗೆ ವಿನೂತನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಮೂಡುಬಿದಿರೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಅಡುಗೆ ಕೆಲಸಗಳಿಂದ ಕೌಶಲ್ಯ ವೃದ್ಧಿಸುತ್ತದೆ.
ಪ್ರತಿಯೊಂದು ವ್ಯಂಜನಗಳಿಗೂ ಅದರ ವಿಶೇಷ ಗುಣವಿದೆ. ಅದನ್ನು ಅರಿತು ಸರಿಯಾಗಿ ಉಪಯೋಗಿಸುವುದರಿಂದ ದೇಹ ಮತ್ತು ಮನಸ್ಸು ಎರಡೂ ಬಲಿಷ್ಠವಾಗುತ್ತದೆ.. ಎಕ್ಸಲೆಂಟ್ ನ ಈ ಆಹಾರ ಉತ್ಸವ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯಲಿ ಎಂದರು.
ವೇದಿಕೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಮಾನಸ ದ್ವಾರಕನಾಥ್, ಸುನಂದ ಪಿ ಜೈನ್, ವೀರಶ್ರೀ ಸಂಪತ್, ಸಚಿನ್, ಫುಡ್ ಕೋರ್ಟಿನ ರಾಘವೇಂದ್ರ, ವಿವೇಕ್ ಉಪಸ್ಥಿತರಿದ್ದರು
ಸಂಸ್ಥೆಯ ವಾಣಿಜ್ಯ ವಿಭಾಗ ಮತ್ತು ಪ್ರೌಢಶಾಲಾ ವಿಭಾಗ ಆಹಾರೋತ್ಸವವನ್ನು ಆಯೋಜಿಸಿತ್ತು.
ಕನ್ನಡ ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಸ್ವಾಗತಿಸಿದರು, ಆಂಗ್ಲ ಭಾಷೆ ಉಪನ್ಯಾಸಕಿ ಪ್ರಿಯಾಂಕ ಕಾಯ೯ಕ್ರಮ ನಿರೂಪಿಸಿದರು.
