ತೆಂಕಮಿಜಾರಿನಲ್ಲಿ ನಕಲಿ ಹಕ್ಕುಪತ್ರ ವಿತರಣೆ: ಮೂಲಭೂತ ಸೌಕಯ೯ಗಳಿಂದ ವಂಚಿತವಾಗಿದೆ ಕುಡುಬಿ ಕುಟುಂಬಗಳು

ತೆಂಕಮಿಜಾರಿನಲ್ಲಿ ನಕಲಿ ಹಕ್ಕುಪತ್ರ ವಿತರಣೆ: ಮೂಲಭೂತ ಸೌಕಯ೯ಗಳಿಂದ ವಂಚಿತವಾಗಿದೆ ಕುಡುಬಿ ಕುಟುಂಬಗಳು


ಮೂಡುಬಿದಿರೆ: ತೆಂಕಮಿಜಾರಿನಲ್ಲಿ ಬಡವರಿಗೆ ವಿತರಣೆ ಮಾಡಿರುವ ನಿವೇಶನ ಹಕ್ಕುಪತ್ರವು ನಕಲಿಯಾಗಿದ್ದರಿಂದ 35ಕ್ಕೂ ಅಧಿಕ ಕುಡುಬಿ ಕುಟುಂಬಗಳು ಮೂಲಭೂತ ಸೌಕಯ೯ಗಳಿಂದ ವಂಚಿತರಾಗಿರುವುದು ಕಂಡು ಬಂದಿದೆ. 


ತೆಂಕಮಿಜಾರು ಗ್ರಾ.ಪಂಚಾಯತ್ ವ್ಯಾಪ್ತಿಯ ಕೊಲ್ಲೊಟ್ಟುವಿನ ಅಮೃತ ನಗರದಲ್ಲಿ 35ಕ್ಕೂ ಅಧಿಕ ಕುಡುಬಿ ಕುಟುಂಬಗಳಿಗೆ 23 ವಷ೯ಗಳ ಹಿಂದೆ ಅಂದಿನ ಎಸ್. ಎಂ. ಕೃಷ್ಣ ಸರಕಾರವು ಆಶ್ರಯ ಯೋಜನೆಯಲ್ಲಿ ನಿವೇಶನವನ್ನು ಮಂಜೂರು ಮಾಡಿದ್ದು 2002ರಲ್ಲಿ ಭೂಮಿಯ ಮಾಲೀಕತ್ವದ ಹಕ್ಕನ್ನು ದೃಢಪಡಿಸುವ ಕಾನೂನು ದಾಖಲೆಯಾಗಿರುವ ನಿವೇಶನ ಹಕ್ಕುಪತ್ರವನ್ನು ವಿತರಣೆ ಮಾಡಿತ್ತು.


ಗುಡ್ಡ ಪ್ರದೇಶದಲ್ಲಿ ಮಂಜೂರಾಗಿರುವ ನಿವೇಶನದಲ್ಲಿ ಹಲವು ಕುಡುಬಿ ಕುಟುಂಬಗಳು ಮನೆಗಳನ್ನು ನಿಮಿ೯ಸಿ ವಾಸ ಮಾಡಲು ಆರಂಭಿಸಿದ್ದರು. ಆದರೆ ಆ ಮನೆಗಳಿಗೆ ಕರೆಂಟ್ ಸಂಪಕ೯, ನೀರಿನ ಸಂಪಕ೯, ರಸ್ತೆ ಸಂಪಕ೯ ಕಲ್ಪಿಸಲು ಪಂಚಾಯತ್ ನಲ್ಲಿ ಅಜಿ೯ ನೀಡಲು ಹೋದಾಗಲೇ ಅವರಿಗೆ ಗೊತ್ತಾದದ್ದು ತಮಗೆ ಸರಕಾರ ನೀಡಿರುವ ಹಕ್ಕುಪತ್ರ ಫೇಕ್ ಎಂದು.


ನಕಲಿ ಹಕ್ಕುಪತ್ರದಿಂದ ಮೋಸ ಹೋದ ಕುಡುಬಿ ಕುಟುಂಬಗಳು : ಶಿಕ್ಷಣ ಹಾಗೂ ಆಥಿ೯ಕವಾಗಿ ತೀರ ಹಿಂದುಳಿದಿರುವ ಕುಡುಬಿ ಜನಾಂಗದ ಗಿರಿಜಾ, ಮೀನಾಕ್ಷಿ, ಭಾರತಿ, ಮೋಹನ ಗೌಡ, ತಿಮ್ಮಪ್ಪ ಗೌಡ, ವಿಮಲ, ವೀರಮ್ಮ, ಬೇಬಿ, ಕಮಲ, ಗೀತಾ, ಮಾಧವ ಗೌಡ, ವಿಮಲ,ಭಾಗೀರಥಿ, ಲಿಂಗು ಗೌಡ, ದೊಂಬಯ್ಯ ಗೌಡ ಹಾಗೂ ಪದ್ಮಾವತಿ ಲಕ್ಷ್ಮಣ ಗೌಡ ಸಹಿತ 35ಕ್ಕೂ ಹೆಚ್ಚಿನ ಕುಟುಂಬಗಳಿಗೆ ಸರಕಾರವು ಫೇಕ್ ಹಕ್ಕುಪತ್ರಗಳನ್ನು ನೀಡುವ ಮೂಲಕ ಅವರಿಂದ ಮೂಲಭೂತ ಸೌಕರ್ಯಗಳನ್ನು ಕಸಿದುಕೊಂಡು ಮೋಸ ಮಾಡಿರುವುದು ವಿಷಾಧಕರ.


ತಮಗೆ ಸಿಕ್ಕಿರುವ ಹಕ್ಕುಪತ್ರ ನಕಲಿ ಹಕ್ಕುಪತ್ರವೆಂದು ಗೊತ್ತಾದದ್ದು ತಾವು ನೀರಿನ ಸಂಪಕ೯, ಕರೆಂಟ್ ಸಂಪಕ೯ ಬೇಕೆಂದು ಪಂಚಾಯತ್ ಗೆ ಅಜಿ೯ ನೀಡಲು ಹೋದಾಗ. ಈ ಫೇಕ್ ಹಕ್ಕುಪತ್ರದಿಂದಾಗಿ ನಮಗೆ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೂ ತೊಂದರೆಯಾಗುತ್ತಿದೆ. ತಮ್ಮ ತಮ್ಮ ಮನೆಗಳಿಗೆ ಹೋಗುವ ರಸ್ತೆಯೂ ಸಮಪ೯ಕವಾಗಿಲ್ಲದಿರುವುದರಿಂದ ತೊಂದರೆಯನ್ನು ಅನುಭವಿಸುತ್ತಿದ್ದೇವೆ ಎಂದು ನಕಲಿ ಹಕ್ಕುಪತ್ರ ಪಡೆದುಕೊಂಡಿರುವ ಕುಟುಂಬಗಳು ಪ್ರತಿಕ್ರಿಯಿಸಿದ್ದಾರೆ. 


ಆಶ್ರಯ ಯೋಜನೆಯಲ್ಲಿ ಅಮೃತನಗರದಲ್ಲಿ ಮನೆಗಳನ್ನು ನಿಮಿ೯ಸಲು 2002ರಲ್ಲಿ ಅಂದಿನ ಸರಕಾರವು ಕಂದಾಯ ಇಲಾಖೆಯ ಮೂಲಕ 35ಕ್ಕೂ ಹೆಚ್ಚಿನ ಕುಡುಬಿ ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡಿತ್ತು. ಆದರೆ ಆ ಹಕ್ಕುಪತ್ರಗಳು ಫೇಕ್ ಎಂದು ಇತ್ತೀಚೆಗೆ ಗಮನಕ್ಕೆ ಬಂದಿದೆ. ಮಾನವೀಯತೆಯ ನೆಲೆಯಲ್ಲಿ ಕೆಲವು ಮನೆಗಳಿಗೆ ಬೆಳಕು ಯೋಜನೆಯಲ್ಲಿ ವಿದ್ಯುತ್ ಸಂಪಕ೯ ಒದಗಿಸಲಾಗಿದೆ. ರಸ್ತೆಯನ್ನು ಸ್ವಲ್ಪ ಸರಿ ಪಡಿಸಲಾಗಿದೆ ಉಳಿದಂತೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲು ಕಷ್ಟ ಸಾಧ್ಯವಾಗಿದೆ: ಶಾಲಿನಿ ಕೆ. ಸಾಲ್ಯಾನ್ (ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ)

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article