ಮೂಡುಬಿದಿರೆ ಕಂಬಳ ಪೂವ೯ಸಿದ್ಧತಾ ಸಭೆ
ನಂತರ ಮಾತನಾಡಿದ ಕೋಟ್ಯಾನ್ ಮೂಡುಬಿದಿರೆ ಕಂಬಳವನ್ನು ಸುವ್ಯವಸ್ಥಿತ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು ಭರದಿಂದ ನಡೆಯುತ್ತಿವೆ. "ಈ ಬಾರಿಯ ವಿಶೇಷತೆಯಾಗಿ ಅಬ್ಬಕ್ಕ ರಾಣಿಯ 500ನೇ ಜನ್ಮ ವರ್ಷಾಚರಣೆಯ ನೆನಪಿಗಾಗಿ 500 ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುವುದು," ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಪಾರ್ಕಿಂಗ್ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಂಬಳಕ್ಕೆ ಅನುಕೂಲವಾಗುವಂತೆ ಕರೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದ ಅವರು ಎಲ್ಲರ ಸಹಕಾರ ಕೋರಿದರು.
ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, "ಮೂಡುಬಿದಿರೆ ಕಂಬಳವು ಈ ಹಿಂದೆ 228 ಜೊತೆ ಕೋಣಗಳು ಭಾಗವಹಿಸಿದ ದಾಖಲೆ ಹೊಂದಿದೆ. ಇಲ್ಲಿ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನೇರ ಪ್ರಸಾರವಿರುವುದರಿಂದ ಪ್ರತಿಯೊಂದು ಹಂತದಲ್ಲೂ ಶಿಸ್ತು ಮತ್ತು ಜಾಗರೂಕತೆ ಅತ್ಯಗತ್ಯ," ಎಂದರು.
ಕಂಬಳ ಸಮಿತಿಯ ಕೋಶಾಧಿಕಾರಿ ಭಾಸ್ಕರ್ ಕೋಟ್ಯಾನ್, ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ಕಾರ್ಯದರ್ಶಿ ರಂಜಿತ್ ಪೂಜಾರಿ, ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಕಾಯ೯ದಶಿ೯ ಹರಿಪ್ರಸಾದ್ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಪ್ರಮುಖರಾದ ಶಾಂತಿಪ್ರಸಾದ್ ಹೆಗ್ಡೆ, ಭುವನಾಭಿರಾಮ ಉಡುಪ, ಈಶ್ವರ ಕಟೀಲು ಮುಂತಾದವರು ಉಪಸ್ಥಿತರಿದ್ದರು.