ಯುವವಾಹಿನಿ ಕ್ರೀಡಾ ನಿದೇ೯ಶಕರಾಗಿ ಶಂಕರ್ ಎ. ಕೋಟ್ಯಾನ್ ಆಯ್ಕೆ
Monday, December 22, 2025
ಮೂಡುಬಿದಿರೆ: ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ನಿರ್ದೇಶಕರಾಗಿ ಮೂಡುಬಿದಿರೆಯ ಮಾರುತಿ ಟಯರ್ಸ್ ಮಾಲಕರಾದ ಶಂಕರ್ ಏ. ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಅವರು ಮೂಡುಬಿದಿರೆ ಯುವ ವಾಹಿನಿ ಘಟಕದ ಅಧ್ಯಕ್ಷರಾಗಿ ಹಲವಾರು ಜನಪರ ಕೆಲಸಗಳನ್ನು ನಿರ್ವಹಿಸಿ ಗಮನಸೆಳೆದಿದ್ದಾರೆ. ಮಾತ್ರವಲ್ಲದೆ ಯುವ ವಾಹಿನಿಗೆ ಅತ್ಯಧಿಕ ಹೊಸ ಸದಸ್ಯರ ಸೇರ್ಪಡೆ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದರು.