ಸಾಯಿ ಮಾನಾ೯ಡ್ ಸೇವಾ ಟ್ರಸ್ಟ್ ನಿಂದ 84ನೇ ಸೇವಾ ಯೋಜನೆ ಹಸ್ತಾಂತರ

ಸಾಯಿ ಮಾನಾ೯ಡ್ ಸೇವಾ ಟ್ರಸ್ಟ್ ನಿಂದ 84ನೇ ಸೇವಾ ಯೋಜನೆ ಹಸ್ತಾಂತರ


ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾರ್ನಾಡ್ ಇದರ 84ನೇ ಸೇವಾ ಯೋಜನೆ ಡಿಸೆಂಬರ್ ತಿಂಗಳ 1ನೇ ಯೋಜನೆಯನ್ನು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡ್ ಗ್ರಾಮದ ರಶ್ಮಿತಾ ಅವರ ಚಿಕಿತ್ಸೆಗೆ ರೂ 10,000ನ್ನು ಡಿ.21ರಂದು ಹಸ್ತಾಂತರಿಸಲಾಯಿತು. 

ರಶ್ಮಿತಾ ಅವರು ನರಕ್ಕೆ ಸಂಬಂಧ ಪಟ್ಟ ಡಿ.ವಿ.ಟಿ. ಸಮಸ್ಯೆಯಿಂದ ಒಂದು ತಿಂಗಳಿನಿಂದ ಬಳಲುತ್ತಿದ್ದು ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೆ 2ಲಕ್ಷ ದಷ್ಟು ಖರ್ಚಾಗಿರುತ್ತದೆ. ಮುಂದಿನ ಚಿಕಿತ್ಸೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ಹಣ ಹೊಂದಿಸಲು ಕಷ್ಟ ಸಾಧ್ಯ. ರಶ್ಮಿತಾ ಅವರ ಸಹೋದರ ಶ್ರೀರಾಜ್ ಸೇವಾ ತಂಡದ ಸದಸ್ಯರು ಆಗಿರುವುದರಿಂದ 84ನೇ ಸೇವಾ ಯೋಜನೆಯ ಚೆಕ್ಕನ್ನು  ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article