ನೆರೆಯ ದೇಶಗಳಿಂದ ಪೋಲಿಯೋ ಹರಡುವ ಸಾಧ್ಯತೆ: 4 ದಿನಗಳ ಕಾಲ ಲಸಿಕೆ ಅಭಿಯಾನ
ಭಾನುವಾರ ಪುತ್ತೂರು ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ತೂರು ತಾಲೂಕಿನಲ್ಲಿ 12,500 ಮಕ್ಕಳಿದ್ದಾರೆ. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ 5 ವರ್ಷದೊಳಗಿನ ಒಟ್ಟು 19,958 ಮಕ್ಕಳಿದ್ದಾರೆ. ಈ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. 85 ಬೂತ್ ಗಳನ್ನು ತೆರೆಯಲಾಗಿದ್ದು, 344 ಮಂದಿ ಸಿಬಂದಿ ಈ ಸೇವೆಯಲ್ಲಿದ್ದಾರೆ. ಆರೋಗ್ಯ ಕೇಂದ್ರಗಳು, ಅಂಗನವಾಡಿ, ಬಸ್‌ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗಳಲ್ಲಿ ಬೂತ್ ಕಾರ್ಯಾಚರಿಸುತ್ತಿದ್ದು, ಮುಂದಿನ 3 ದಿನಗಳಲ್ಲಿ ಮನೆ ಮನೆ ಭೇಟಿಯ ಮೂಲಕವೂ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು. ಜ್ವರದ ಸಮಸ್ಯೆ ಇರುವ ಮಕ್ಕಳಿಗೂ ಲಸಿಕೆ ಹಾಕುವುದರಿಂದ ಯಾವ ತೊಂದರೆಯೂ ಇಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಸಾಮುದಾಯಿಕ ಆಂದೋಲನ ಸಮಾಜಕ್ಕೆ ಬಂದಿರುವ ಕಾಯಿಲೆಗಳನ್ನು ದೂರ ಮಾಡಲು ಅತ್ಯುತ್ತಮವಾದ ಹಾದಿಯಾಗಿದೆ. ಈ ನಿಟ್ಟಿನಲ್ಲಿ ಪೋಲಿಯೋ ದೂರ ಮಾಡಲು ಸಂಘ ಸಂಸ್ಥೆಗಳ ಸಹಿತ ಎಲ್ಲರೂ ಶ್ರಮಿಸಿಕೊಂಡು ಬಂದಿದ್ದಾರೆ. 5 ವರ್ಷದೊಳಗಿನ ಮಕ್ಕಳಿಗೆ ಎಲ್ಲರೂ ಲಸಿಕೆ ಹಾಕಿಸುವಂತೆ ನೋಡಿಕೊಳ್ಳಬೇಕು ಎಂದರು. ಮಕ್ಕಳ ತಜ್ಞ ಡಾ. ಪ್ರಶಾಂತ್ ಮಗುವಿಗೆ ಪೋಲಿಯೊ ಲಸಿಕೆ ಕೊಡುವ ಮೂಲಕ ಚಾಲನೆ ನೀಡಿದರು.
ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಯಧುರಾಜ್, ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್‌ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಿಬಂದಿ ರಶ್ಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.