1984-1989ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ

1984-1989ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ


ಪುತ್ತೂರು: 1984-1986ರ ಪದವಿ ಪೂರ್ವ ಮತ್ತು ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ 1986-1989ರ ಬಿ.ಕಾಂ. ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ಸುಮಾರು ಮೂರೂವರೆ ದಶಕಗಳ ನಂತರ ತಮ್ಮ ಕಾಲೇಜಿನಲ್ಲಿ ಪ್ರೀತಿಯಿಂದ ಮತ್ತೆ ಒಂದಾಗಿದ್ದರು. ಈ ಕಾರ್ಯಕ್ರಮವು ಕಾಲೇಜಿನಲ್ಲಿರುವ ಪಿಜಿ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಅವರು ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ತಮ್ಮ  ಕಾಲೇಜು ಕಡೆಗೆ ಬರುತ್ತಾ ಇರಬೇಕು ಮತ್ತು ಒಂದು ಉತ್ತಮ ಭಾಂದವ್ಯವನ್ನು ಬೆಳೆಸಬೇಕು ತಾವು ಕಲಿತ ಕಾಲೇಜನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.


ಈ ಕಾರ್ಯಕ್ರಮವು ಹಿರಿಯ ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸಲು ಒಂದು ಅವಕಾಶವನ್ನು ಕಲ್ಪಿಸಿತು. ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಐ. ಭಟ್, ಪ್ರೊ. ಹರಿ ನಾರಾಯಣ ಮಾದವು, ಪ್ರೊ. ಕೆ. ವಸಂತಿ ಸೀತಾರಾಮ್ ಗೌಡ, ಪ್ರೊ. ಜನಾರ್ದನ ಹೆರ್ಲೆ, ಮತ್ತು ಪ್ರೊ. ವಿಷ್ಣು ಭಟ್ ಅವರುಗಳ ಅಮೂಲ್ಯ ಕೊಡುಗೆಗಳಿಗಾಗಿ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿಗಳಾದ ಕರ್ನಲ್ ಮನೋಜ್ ಕುಮಾರ್ ಆರ್., ಬಿ.ಎಸ್. ಭಟ್, ಇಸ್ಮಾಯಿಲ್ ಎಂ., ಎಂ.ಎಸ್. ಕೃಷ್ಣಯ್ಯ, ಅನಂತ ನಾರಾಯಣ ಬಿ., ಮೀರಾ ಜಗದೀಶ್, ಮೋಹನ ದಾಸ್ ರೈ, ರೋನಾಲ್ಡ್ ಪಿಂಟೋ, ಮತ್ತು ಇತರರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ತೇಜಸ್ವಿ ಭಟ್, ಮತ್ತು ಶೈಕ್ಷಣಿಕ ಉಪ ಕುಲಸಚಿವ ವಿಪಿನ್ ನಾಯಕ್ ಅವರು ಉಪಸ್ಥಿತರಿದ್ದು, ತಮ್ಮ ವಿದ್ಯಾರ್ಥಿ ಜೀವನದ ಅಮೂಲ್ಯ ನೆನಪುಗಳನ್ನು ಮೆಲುಕು ಹಾಕಲು ಹಾಗೂ ಹಂಚಿಕೊಳ್ಳಲು 62 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article