ಡಿ.7 ರಂದು ದಸಂಸ ವತಿಯಿಂದ ಅಂಬೇಡ್ಕರ್ ‘ಪರಿನಿಭಣ’ ದಿನಾಚರಣೆ
ಪುತ್ತೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪುತ್ತೂರಿನ ದ್ವಾರಕಾ ಹೋಟೇಲಿನ ಸಭಾಂಗಣದಲ್ಲಿ ಡಿ.7 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ‘ಪರಿನಿಭಣ’ ದಿನಾಚರಣೆ ನಡೆಯಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮವನ್ನು ದಸಂಸ ಹಿರಿಯ ಸಂಚಾಲಕರಾದ ವಾಸುದೇವ ಸಾಮೆತ್ತಡ್ಕ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಪತ್ರಕರ್ತ ಸಂಶುದ್ದೀನ್ ಸಂಪ್ಯ, ಗಣೇಶ್ ಕಾರೆಕ್ಕಾಡು, ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ಭಾಗವಹಿಸಲಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತತ್ವ ಸಿದ್ಧಾಂತಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಆ ಮೂಲಕ ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪ ಅವರ ಕನಸುಗಳನ್ನು ನನಸು ಮಾಡುವ ಚಿಂತನೆ ಅಡಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಸಂಘಟನೆಗಳನ್ನು ವ್ಯವಸ್ಥೆ ಮಾಡಲಾಗಿದೆ.
ಪುತ್ತೂರು ತಾಲೂಕಿನ ಸಂಚಾಕರಾಗಿ ಸುಂದರ್ ನಿಧಿಮುಂಡ, ಸಂಘಟನಾ ಸಂಚಾಲಕರಾಗಿ ಗುರುವ ಬಿ.ಎ ನಿಡ್ಪಳ್ಳಿ, ಶ್ರೀನಿವಾಸ ಭರಣ್ಯ, ವಸಂತ ಶಾಂತಿಗೋಡು, ಪ್ರವೀಣ್ ಪಾಪೆಮಜಲು, ಕೋಶಾಧಿಕಾರಿಯಾಗಿ ಮಾಧವ ಸರ್ವೆ, ಗೌರವ ಸಲಹೆಗಾರರಾಗಿ ಗಣೇಶ್ ಕಾರೆಕ್ಕಾಡು, ಕೆ.ಕೆ. ಪೂವಪ್ಪ, ನಿಶಾಂತ್ ಶಾಂತಿಗೋಡು, ಶ್ರೀಧರ್ ನಗರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೆ.ಕೆ. ಪೂವಪ್ಪ ಹಾಗೂ ಸುಂದರ್ ನಿಧಿಮುಂಡ ಇದ್ದರು.