ಶಾಂತಿ ಕದಡುವ ಬಿಜೆಪಿ ‘ಗಾಂಧಾರಿ’ ನಂಜು ಬೇಡ: ಕೃಷ್ಣಪ್ರಸಾದ್ ಆಳ್ವ

ಶಾಂತಿ ಕದಡುವ ಬಿಜೆಪಿ ‘ಗಾಂಧಾರಿ’ ನಂಜು ಬೇಡ: ಕೃಷ್ಣಪ್ರಸಾದ್ ಆಳ್ವ

ಪುತ್ತೂರು: ಕೇಪು ಜಾತ್ರೆಯಲ್ಲಿ ಕೋಳಿ ಅಂಕ ಧಾರ್ಮಿಕ ಹಿನ್ನೆಲೆಯುಳ್ಳದ್ದು. ಅದಕ್ಕಾಗಿ ಶಾಸಕರು ಪೊಲೀಸರಲ್ಲಿ ಮನವಿ ಮಾಡಿ ಒಂದು ದಿನ ಕೋಳಿ ಅಂಕ ಮಾಡಿಸಿದ್ದಾರೆ. ಆದರೆ ಅದನ್ನು ಗಲಾಟೆ ಎಬ್ಬಿಸುವ ಉದ್ದೇಶದಿಂದ ಮತ್ತು ಪುತ್ತೂರಿನಲ್ಲಿ ಶಾಂತಿ ಕದಡುವ ದೃಷ್ಟಿಯಿಂದ ಬಳಸಿರುವ ಬಿಜೆಪಿಯವರು ಮರುದಿನವೂ ಕೋಳಿ ಅಂಕವನ್ನು ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕೇಪು ಕೋಳಿ ಅಂಕದ ಸಮಯದಲ್ಲಿ ಶಾಸಕರ ವಿರುದ್ಧ ಮಾತನಾಡಿ, ಸರ್ಕಾರದ ನಿಲುವುಗಳ ಕುರಿತು ಖಂಡನೆ ಸಹಿತ ವಿವಿಧ ಆರೋಪಗಳನ್ನು ಹೊರಿಸಿರುವುದು ಸರಿಯಲ್ಲ. ಸತೀಶ್ ಕುಂಪಲ ಅವರು ರಾಜ್ಯ ಸರ್ಕಾರದ ಹೆಸರನ್ನು ಹೇಳಲು ಅಸಮರ್ಥರು. ಸರ್ಕಾರ ಸುಭದ್ರವಾಗಿ ಸಂವಿಧಾನ ಬದ್ಧವಾಗಿ, ಜಾತ್ಯಾತೀತವಾಗಿ ಯಾವ ಭಾಗದ ಜನರಿಗೂ ಕೂಡಾ ತೊಂದರೆ ಆಗದಂತೆ ಆಡಳಿತ ನಡೆಸುತ್ತಿದೆ. ಶಾಸಕರು ಕೇಪು ಕೋಳಿ ಅಂಕದ ವಿಚಾರದಲ್ಲಿ ಆ ಭಾಗದ ಜನರ ಮನವಿ ಮೇರೆಗೆ ಅಲ್ಲಿಗೆ ಹೋಗಿ ಶಾಸಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರಲ್ಲಿ ಯಾವ ತಪ್ಪು ಆಗಿಲ್ಲ. ಹಿಂದುಗಳ ಧಾರ್ಮಿಕ ಸಂಪ್ರದಾಯವನ್ನು ಕಾಪಾಡಿದ್ದಾರೆ ಎಂದರು.

ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರದ ಭಜನಾ ಮಂದಿರ, ದೈವಸ್ಥಾನಗಳ ಅಡಿಸ್ಥಳವನ್ನು ಅವರವರಿಗೆ ಸಿಗುವಂತೆ ಸರ್ಕಾರದ ಮೂಲಕ ಪ್ರಯತ್ನ ಮಾಡಿದ್ದಾರೆ. ಸಾವಿರಾರು ಕೋಟಿ ಅನುದಾನವನ್ನು ಪುತ್ತೂರಿಗೆ ತಂದಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಮಾಡುತ್ತಿದ್ದಾರೆ. ತಾಲೂಕಿನ ಎಲ್ಲಾ ದೇವಸ್ಥಾನಗಳಿಗೂ ಅನುದಾನ ನೀಡುತ್ತಿದ್ದಾರೆ. ಕೃಷಿಕರ ಬಗ್ಗೆ, ಅಡಿಕೆ ಬೆಳೆ ವಿಮೆ ಯೋಜನೆ, ತುಳು ಭಾಷೆ, ಕಂಬಳದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಾರೆ. ಮಹತ್ವಾಕಾಂಕ್ಷೆ ಯೋಜನೆಯಾದ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸಿದ್ದಾರೆ. ಸುಮಾರು ರೂ. 2008 ಕೋಟಿ ಅನುದಾನ ತಂದು ಇನ್ನೂ ಅನೇಕ ಯೋಜನೆಯ ಗುರಿ ಇಟ್ಟುಕೊಂಡ ಪುತ್ತೂರಿನ ಅಭಿವೃದ್ಧಿಯ ಇಟ್ಟುಕೊಂಡ ಪುತ್ತೂರಿನ ಅಭಿವೃದ್ಧಿಯ ಹರಿಕಾರ ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈ ಎಂದ ಅವರು ಇವೆಲ್ಲವನ್ನು ನೋಡಿ ಬಿಜೆಪಿ ಜಿಲ್ಲಾಧ್ಯಕ್ಷರು ಮಾತನಾಡಲಿ ಎಂದರು.

ಶಾಸಕರ ವಿರುದ್ಧ ಮಾತನಾಡುವ ಕುಂಪಲ ಅವರು ಗೌರವಾನ್ವಿತ ವಾಜಪೇಯಿ ವಿರಾಸತ್ ಕಾರ್ಯಕ್ರಮವನ್ನು ಪುತ್ತೂರಿನ ಒಂದು ಮೂಲೆಯಲ್ಲಿ ಮಾಡಿ ಸ್ವಲ್ಪ ಜನರನ್ನು ಸೇರಿಸಿ ಸಣ್ಣ ಮಟ್ಟಿನಲ್ಲಿ ಮುಗಿಸಿದ್ದಾರೆ. ಇದು ಬಿಜೆಪಿ ಜಿಲ್ಲಾಧ್ಯಕ್ಷರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದ ಕೃಷ್ಣಪ್ರಸಾದ್ ಆಳ್ವ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಜಿಲ್ಲೆಯಲ್ಲಿ ಸಂಚರಿಸಬೇಕಾಗಿತ್ತು. ಆದರೆ ಅವರು ಪುತ್ತೂರಿನಲ್ಲಿಯೇ ಸುತ್ತುದಿದ್ದಾರೆ. ಸತೀಶ್ ಕುಂಪಲ ಅವರು ದಿನಕ್ಕೆ 10 ಬಾರಿ ಪುತ್ತೂರನ್ನು ಸುತ್ತಿದರೂ ಕೂಡಾ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಾಧನೆಯನ್ನು ಪ್ರಶ್ನೆ ಮಾಡಲು ಅವರಿಂದ ಸಾಧ್ಯವಿಲ್ಲ ಎಂದವರು ಹೇಳಿದರು.

ಗಾಂಧಾರಿ ನಂಜು ಬೇಡ:

ಮಾಜಿ ಶಾಸಕ ಸಂಜೀವ ಮಠಂದೂರು ಕೂಡಾ ಕೇಪುವಿನಲ್ಲಿ ನಮ್ಮ ಶಾಸಕರ ವಿರುದ್ಧ ಮಾತನಾಡಿದ್ದಾರೆ. ಮುಂದಿನ ದಿನವಾದರೂ ಗಾಂಧಾರಿ ನಂಜನ್ನು ಬಿಟ್ಟುಬಿಡಿ, ಪುತ್ತೂರಿನ ಅಭಿವೃದ್ಧಿಗೆ ನಮ್ಮೊಂದಿಗೆ ಸಹಕರಿಸಿ. ನಿಮ್ಮ ಯುವಕರ ತಂಡ ಅಶೋಕ್ ರೈ ಅವರನ್ನು ಅಭಿನಂದಿಸಿದೆ. ಅವರನ್ನು ನೋಡಿ ಕಲಿಯಿರಿ ಎಂದರು.

ಗೋಷ್ಟಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ನೆಕ್ಕಿಲು, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article