ಕಳತ್ತೂರು ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ
Sunday, December 21, 2025
ಶಿರ್ವ: ಕಳತ್ತೂರು ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಭಾನುವಾರ ಜರುಗಿದ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಕಳತ್ತೂರು ಗ್ರಾ,ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್, ಶಿರ್ವ ರೋಟರಿ ಪಲ್ಸ್ ಪೊಲಿಯೋ ಪ್ರತಿನಿಧಿ ದಿವಾಕರ ಶೆಟ್ಟಿ ಕಳತ್ತೂರು, ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ಕಾಮತ್, ಗ್ರಾ.ಪಂ. ಸದಸ್ಯೆ ಶಾರದೇಶ್ವರೀ, ಶಿರ್ವ ಸೊಸೈಟಿ ನಿರ್ದೇಶಕ ಗಣೇಶ, ಅಂಗನವಾಡಿ ಹಾಗೂ ಆಶಾ ಕರ್ಯಕರ್ತೆಯರು ಉಪಸ್ಥಿತರಿದ್ದರು.