ಅತಿಕ್ರಮಣ ಅಂಗಡಿ ತೆರವುಗೊಳಿಸುವ ವೇಳೆ ಕರ್ತವ್ಯಕ್ಕೆ ಅಡ್ಡಿ
Sunday, December 7, 2025
ಸುಬ್ರಹ್ಮಣ್ಯ: ಅತಿಕ್ರಮಣ ಮಾಡಿದ್ದ ಅಂಗಡಿಯ ತೆರವು ಮಾಡಿದ ವೇಳೆ ಬೆದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ಅಂಗಡಿಗಳನ್ನು 12 ತಿಂಗಳ ಅವಧಿಗೆ ನೀಡುತ್ತಿದ್ದು ಇದರಲ್ಲಿ ಕೆಲವು ಅಂಗಡಿಗಳು ಅವಧಿ ಮೀರಿದ್ದು ದೇವಸ್ಥಾನಕ್ಕೆ ಬಾಡಿಗೆ ಪಾವತಿ ಮಾಡದೆ ಫುಟ್ಪಾತ್‌ನ್ನು ಅತಿಕ್ರಮಣ ಮಾಡಿ ವ್ಯಾಪಾರ ನಡೆಸುತ್ತಿದ್ದು ಇದರಿಂದ ಭಕ್ತಾದಿಗಳಿಗೆ ನಡೆದಾಡಲು ತೊಂದರೆಯಾಗುತ್ತಿರುವ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೇವಸ್ಥಾನದ ಎಇಒ ಅವರು ದೇವಳದ ಸಿಬ್ಬಂದಿಯನ್ನು ಸ್ಥಳ ಪರಿಶೀಲನೆಗೆಂದು ಆದಿ ಸುಬ್ರಹ್ಮಣ್ಯದ ಅಂಗಡಿ ಮಳಿಗೆಗಳಿಗೆ ಕಳುಹಿಸಿದ ವೇಳೆ ಅಂಗಡಿ ಮಾಲಕ ಯಲ್ಲಪ್ಪ ಭಂಡಾರಿ ಎಂಬಾತ ದೇವಸ್ಥಾನದ ಸಿಬ್ಬಂದಿ ಮಹೇಶ್ ಎಂಬವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಅಲ್ಲದೆ ಮರಿಯಪ್ಪ ಭಂಡಾರಿ ಎಂಬವರ ಮೂಲಕ ಕರೆ ಮಾಡಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ ಕೂಡಲೇ ಘಟನಾ ಸ್ಥಳಕ್ಕೆ ದೇವಸ್ಥಾನದ ಎಇಒ ಯೇಸುರಾಜ್ ಹಾಗೂ ಸಿಬ್ಬಂಧಿಗಳು ಆಗಮಿಸಿ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಿ ಸಂಜೆಯೊಳಗೆ ತೆರವು ಮಾಡಲು ಸೂಚಿಸಿದರು.