ಬೆಳುವಾಯಿ ಹೈಸ್ಕೂಲ್ ಸ್ಥಾಪಕ ಜೆ. ಎಂ. ಪಡುಬಿದ್ರಿ ನಿಧನ

ಬೆಳುವಾಯಿ ಹೈಸ್ಕೂಲ್ ಸ್ಥಾಪಕ ಜೆ. ಎಂ. ಪಡುಬಿದ್ರಿ ನಿಧನ


ಮೂಡುಬಿದಿರೆ: ವಿದ್ಯಾವರ್ಧಕ ಸಂಘ, ಬೆಳುವಾಯಿ ಇದರ ಆಡಳಿತದಲ್ಲಿ ನಡೆಸಲ್ಪಡುವ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಕೆಸರಗದ್ದೆ, ಬೆಳುವಾಯಿ ಇದರ ಸ್ಥಾಪಕ ಜೆ. ಎಂ. ಪಡುಬಿದ್ರಿ ಇವರು ಡಿ.6ರಂದು ಮೂಡುಬಿದಿರೆ ಜೈನ್ ಪೇಟೆಯ ನಿವಾಸದಲ್ಲಿ ನಿಧನ ಹೊಂದಿದರು.ಪತ್ನಿ ಪುತ್ರಿ 2 ಪುತ್ರರನ್ನು ಅಗಲಿದ್ದಾರೆ.

ಬಾಲ್ಯದಲ್ಲಿ ಮುಂಬಯಿಗೆ ಹೋಗಿ, ಕ್ಯಾoಟೀನ್ ಉದ್ಯೋಗದೊಂದಿಗೆ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಮುಂಬೈ ಯಲ್ಲಿ ಯಂಗ್ ಮೆನ್ ಸೊಸೈಟಿ ಇವನಿಂಗ್ ಸ್ಕೂಲ್ ಸ್ಥಾಪಿಸಿ ಪ್ರಾoಶುಪಾಲರೂ ಆಗಿದ್ದರು. ನಂತರ ಮುಂಬೈ ಯಲ್ಲಿ ಜೆ ಎಮ್ಸ್ ಕೆಟರಿಂಗ್ ಎಂಬ ಸ್ವಂತ ಉದ್ದಿಮೆಯನ್ನು ನೆಡೆಸಿದ್ದರು. ಹರಿಹರದ ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಂ ಇಂಡಸ್ಟ್ರಿಯಲ್ಲಿ ಉದ್ಯೋಗಿಯಾಗಿದ್ದು, ಚಲನಚಿತ್ರವಾಗಿ ಪ್ರಸಿದ್ದಿಯಾದ ಗುಡ್ಡೆದ ಭೂತ ನಾಟಕದಲ್ಲಿಯೂ ನಟಿಸಿದ್ದರು. ಅಲ್ಲದೆ ಕಂಗಿಲು ಜಾನಪದ ನೃತ್ಯದ ಕಲಾವಿದರೂ ಆಗಿದ್ದು, ಹಲವಾರು ಕಾರ್ಯಕ್ರಮ ನೀಡಿದ್ದರು. 

 ಮೂಲತಃ ಸಿಪಾಯಿ ಮನೆ ಪಡುಬಿದ್ರಿ ಇಲ್ಲಿಯ ಮನೆತನದವರಾಗಿದ್ದು, ನಂತರ ಬೆಳುವಾಯಿಯಲ್ಲಿ ವಾಸವಾಗಿದ್ದು,1979 ರಲ್ಲಿ ಬೆಳುವಾಯಿ ತುಳುನಾಡ ಹೈಸ್ಕೂಲ್  ಸ್ಥಾಪಿಸಿದರು. ಮುಂದೆ 1982ರಲ್ಲಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢ ಶಾಲೆಯಾಗಿ ನಾಮಕರಣಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article