ದೇಶಕ್ಕೆ ಹೆಮ್ಮೆ ತಂದ ಧನಲಕ್ಷ್ಮಿ ಪೂಜಾರಿ: ಸತ್ಯಜಿತ್ ಸುರತ್ಕಲ್
ಇದೇ ಸಂದರ್ಭ ಸಾರ್ವಜನಿಕರು ಹಾಗೂ, ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಭಕ್ತ ವೇದಿಕೆ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರು ಧನಲಕ್ಷ್ಮಿ ಪೂಜಾರಿ ಅವರು ಕ್ರೀಡೆಯ ವೇಳೆ ದೈಹಿಕವಾಗಿ ಗಾಯಗೊಂಡರೂ ಪರಿಶ್ರಮದಿಂದ ಮತ್ತೆ ತರಬೇತಿಯನ್ನು ಆರಂಭಿಸಿ ರಾಷ್ಟ್ರೀಯ ಕ್ರೀಡಾ ತಂಡಕ್ಕೆ ಆಯ್ಕೆಯಾಗಿರುವುದು ಸಣ್ಣ ಸಾಧನೆಯಲ್ಲ. ತರಬೇತುದಾರರು, ಪೋಷಕರ ಪ್ರೋತ್ಸಾಹದಿಂದ ದಕ್ಷಿಣ ಭಾರತದ ಏಕೈಕ ಆಟಗಾರ್ತಿಯಾಗಿ ಧನಲಕ್ಷ್ಮಿ ಪೂಜಾರಿ ಅವರು ಆಯ್ಕೆಯಾಗಿ ವಿಶ್ವಚಾಂಪಿಯನ್ ಭಾರತ ತಂಡವನ್ನು ಪ್ರತಿನಿಧಿಸಿರುವುದು ನಮಗೆಲ್ಲ ಹೆಮ್ಮೆಯನುಂಟು ಮಾಡಿದೆ ಎಂದರು.
ವಿಠ್ಠಬಾ ರುಕುಮಾಯಿ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಚಂದ್ರಶೇಖರ ನಾನಿಲ್ ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಗಂಗಾಧರ ಶಾಂತಿ, ಮನೋಜ್ ಶಾಂತಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ನಿಕಟ ಪೂರ್ವ ಪಾಲಿಕೆ ಸದಸ್ಯೆ ನಯನ ಆರ್.ಕೋಟ್ಯಾನ್, ಕೇಶವ ಬಿ. ಸನಿಲ್, ಶಮ ಕೇಶವ್ ಸನಿಲ್, ಕಬಡ್ಡಿ ಕೋಚ್ ಹಂಸವತಿ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮಣ ಸಾಲ್ಯಾನ್ ಸ್ವಾಗತಿಸಿದರು. ಗುಣವತಿ ರಮೇಶ್ ನಿರೂಪಿಸಿ, ಮೋಹನ್ ಸನಿಲ್ ಪ್ರಶಂಸಾ ಪತ್ರ ವಾಚಿಸಿದರು.