ಉಡುಪಿ-ಬೈಲೂರು ವಾಸುದೇವ ಕೃಪಾ ವಿದ್ಯಾಮಂದಿರ ಶಾಲೆಯ ವಾರ್ಷಿಕೋತ್ಸವ
Thursday, December 18, 2025
ಉಡುಪಿ: ಉಡುಪಿ-ಬೈಲೂರಿನ ವಾಸುದೇವ ಕೃಪಾ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಇಪ್ಪತ್ತನೆಯ ವಾರ್ಷಿಕೋತ್ಸವವು ಇತ್ತೀಚೆಗೆ ಜರುಗಿತು.
ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಅವರು ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಭಾಧ್ಯಕ್ಷರಾಗಿ ಶಾಲಾ ಸಂಚಾಲಕರಾದ ಕೆ. ಅಣ್ಣಪ್ಪ ಶೆಣೈ, ಮುಖ್ಯ ಅತಿಥಿಗಳಾಗಿ ಡಾ. ಕೆ. ಶ್ರೀಧರ್ ಆರ್. ಪೈ, ಹಳೆ ವಿದ್ಯಾರ್ಥಿಗಳಾದ ಹಿತಾಶ್ರೀ, ರಂಜನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ದಯಾನಂದ ಕೋಟ್ಯಾನ್, ಮುಖ್ಯೋಪಾಧ್ಯಾಯಿನಿ ನಿಶಾ, ಶಾಲಾ ನಾಯಕ ಗಗನ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಕಲ್ಯಾಣಿ ಯು. ಪೈ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನೊಂಡಿತು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಯಾನಂದ, ಶಿಕ್ಷಕ ರೋಷನ್ ವಂದಿಸಿದರು. ವಿದ್ಯಾರ್ಥಿಗಳಾದ ವಲ್ಲರೀ, ಕೇನಿಷಾ ಕಾರ್ಯಕ್ರಮ ನಿರೂಪಿಸಿದರು.

