ಜ.11 ರಂದು ‘ಬೀಮ್ ಆರ್ಮಿ’ ಸಂಘಟನೆಯ ಉದ್ಘಾಟನೆ
ಬಂಟ್ವಾಳ: ‘ಚಂದ್ರಶೇಖರ್ ಅಜಾದ್ ರಾವಣ’ ನೇತೃತ್ವದ ‘ಭೀಮ್ ಆರ್ಮಿ’ ಸಂಘಟನೆಯನ್ನು ದ.ಕ. ಜಿಲ್ಲೆಯಲ್ಲಿಯು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಜ.11 ರಂದು ಬಿ.ಸಿ. ರೋಡಿನಲ್ಲಿರುವ ಬಂಟ್ವಾಳ ತಾಲೂಕು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಂಘಟಕ ರಾಜಾ ಚಂಡ್ತಿಮಾರ್ ಅವರು ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬೀಮ್ ಆರ್ಮಿಯ ರಾಜ್ಯಾಧಗಯಕ್ಷ ರಾಜ್ ಗೋಪಾಲ್ ಡಿ.ಎಸ್. ಅವರು ಸಭಾಧ್ಯಕ್ಚತೆ ವಹಿಸಲಿದ್ದು, ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ ಅವರು ಉದ್ಘಾಟಿಸಲಿದ್ದಾರೆ. ಹಲವಾರು ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಮಟ್ಟದ ಸಂಘಟನೆಯಾದರೂ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿಲ್ಲದಿದ್ದು, ಇದೀಗ ಆರಂಭಿಕ ಹಂತವಾಗಿ ದ.ಕ.ಜಿಲ್ಲೆಯ ಬಂಟ್ವಾಳವನ್ನು ಕೇಂದ್ರಸ್ಥಾನವಾಗಿ ಸ್ಥಾಪಿಸಿ, ಬಳಿಕ ಉಡುಪಿ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಪ್ರಮುಖರಾದ ಅಣ್ಣು ಸಾಧನ ಬೆಳ್ತಂಗಡಿ, ಸೋಮನಾಥ ಉಪ್ಪಿನಂಗಡಿ, ಸುಂದರ ನಿಡ್ಪಳ್ಳಿ, ಸಂತೋಷ್ ಭಂಡಾರಿಬೆಟ್ಟು, ನಾರಾಯಣ ಬೊಂಡಾಲ, ಗಣೇಶ್ ಕಾಯರ್ ತಡ್ಕ, ಕೊರಗಪ್ಪ ಮತ್ತಿತರರು ಉಪಸ್ಥಿತರಿದ್ದರು.