ಸಾಲ್ವಾರ್ ಚೂಡಿದಾರ್ ಬುಕ್ ಮಾಡಿ ಹಣ ಕಳೆದುಕೊಂಡ ಮಹಿಳೆ
Thursday, January 15, 2026
ಬಂಟ್ವಾಳ: ಫೇಸ್‌ಬುಕ್‌ನಲ್ಲಿ ಬಂದ ಆರ್ಮಿ ಆಪ್‌ನಲ್ಲಿ ಪ್ರಕಟವಾದ ಜಾಹೀರಾತನ್ನು ಗಮನಿಸಿ ಸಾಲ್ವಾರ್ ಚೂಡಿದಾರ್ ಬಟ್ಟೆಯನ್ನು ಬುಕ್ ಮಾಡಿದ್ದ ಮಹಿಳೆಯೋರ್ವರು 87,524 ರೂ. ಹಣವನ್ನು ಕಳಕೊಂಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾ.ನ ಎಂ. ಶ್ರುತಿ ಪೈ (35) ಎಂಬವರು ಹಣವನ್ನು ಕಳಕೊಂಡವರಾಗಿದ್ದಾರೆ.
ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನೋಡಿ ಜ.3 ರಂದು ಸಾಲ್ವಾರ್ ಚೂಡಿದಾರ್ ಬಟ್ಟೆಯನ್ನು ಬುಕ್ ಮಾಡಿ ಹಣವನ್ನು ಪಾವತಿ ಮಾಡಿದ್ದಾರೆ. ನಂತರ ಜ.5 ಮತ್ತು 6 ರಂದು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕರೆ/ವಾಟ್ಸ್‌ಆಪ್ ಮಾಡಿ, ಪಾವತಿ ಸ್ಟಕ್ ಆಗಿದೆ ಎಂದು ಹೇಳಿ ಸ್ಕ್ಯಾನರ್, ರಿಫಂಡ್ ಕೋಡ್ ಮತ್ತು ಬ್ಯಾಂಕ್ ಖಾತೆ ಮೂಲಕ ಮತ್ತೆ ಹಣ ಪಾವತಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಅದರಂತೆ ಒಟ್ಟು 87,524 ರೂ. ಹಣವನ್ನು ಸೈಬರ್ ವಂಚನೆ ಮೂಲಕ ಕಳೆದುಕೊಂಡಿರುತ್ತಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.