ಶಾಸಕ ಕಾಮತ್ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ಸಭಾಂಗಣ ಉದ್ಘಾಟನೆ
ಬಳಿಕ ಶಾಸಕರು ಮಾತನಾಡಿ, ಈ ಪ್ರದೇಶಕ್ಕೊಂದು ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂದು ಇಲ್ಲಿನ ನಿಕಟ ಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಶಕೀಲಾ ಕಾವ ರವರು ಹಲವು ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಅದರಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 25 ಲಕ್ಷ ಅನುದಾನವನ್ನು ಹೊಂದಿಸಿಕೊಂಡು ಶೀಘ್ರವಾಗಿ ಕಾಮಗಾರಿ ಮುಗಿಸಲಾಗಿತ್ತು. ಇದೀಗ ಅದರ ಉದ್ಘಾಟನೆಗೊಳ್ಳುತ್ತಿದ್ದು ಈ ಭಾಗದ ಎಲ್ಲರಿಗೂ ಉಪಯೋಗವಾಗಲೆಂದು ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಕಮಲಾಕ್ಷಿ, ಗಂಗಾಧರ ಕದ್ರಿ, ನೈನಾ ವಿಶ್ವನಾಥ್, ಚಂದ್ರಶೇಖರ ಬಜಾಲ್, ರವಿಚಂದ್ರ, ವೆಂಕಟೇಶ್, ದೃತೇಶ್ ಗುಂಡಳಿಕೆ, ವಿಜಯ ಶೆಣೈ, ರಮೇಶ್ ಮುಂಡಾಣ, ಚಂದ್ರಕಾಂತ್, ಶಿವಪ್ಪ ನಂತೂರು, ಸಂತೋಷ್ ನಂತೂರು, ಚೇತನ ನರೇಂದ್ರ, ಉಮಾ ಕಂಡೆಟ್ಟು, ಉಮಾ ಶೆಟ್ಟಿ, ಉಷಾ ಶೆಟ್ಟಿ, ಚಿನ್ನಪ್ಪ, ವಿಠಲ ಗುಂಡಳಿಕೆ, ಶಿವಾನಂದ, ಚಂದ್ರಕಾಂತ್, ಯಮುನಪ್ಪ, ಅಖಿಲೇಶ್, ಯಶವಂತಿ, ರೋಹಿತ್, ಮತ್ತು ಕೊರಗಜ್ಜನ ಗುಡಿಯ ನವೀನ್, ಗಂಗಾಧರ್, ದಯಾನಂದ ಸೇರಿದಂತೆ ವಾರ್ಡಿನ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.