ಭಾರತ ಸಂಸ್ಕೃತಿಗಳ ಸಂಪತ್ತದ್ಬರಿತ ದೇಶ: ಮುಕ್ತಾನಂದ ಶ್ರೀ

ಭಾರತ ಸಂಸ್ಕೃತಿಗಳ ಸಂಪತ್ತದ್ಬರಿತ ದೇಶ: ಮುಕ್ತಾನಂದ ಶ್ರೀ


ಬಂಟ್ವಾಳ: ಸಂಸ್ಕೃತಿಗಳ ಸಂಪತ್ತದ್ಬರಿತವಾದ ಭಾರತವನ್ನು ಭಾರತವಾಗಿಯೇ ಉಳಿಸಲು ಹಿಂದೂ ಸಂಗಮದಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಶ್ರೀ ಜಗದ್ಗುರು ರಾಘವೇಂದ್ರ ಪೀಠ ಕರಿಂಜೆ ಮಠದ ಶ್ರೀ ಮುಕ್ತಾನಂದ ಶ್ರೀಗಳವರು ಹೇಳಿದ್ದಾರೆ. 

ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಭಾನುವಾರ ಸಂಜೆ ಚೆನ್ನೈತೋಡಿ ಮಂಡಲದ ಆಲದಪದವಿನ ಶ್ರೀನಿವಾಸನಗರದಲ್ಲಿ ನಡೆದ ಹಿಂದು ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನಗೈದರು.

ಜಾತಿ ವ್ಯವಸ್ಥೆ ಪ್ರಸ್ತುತ ದಿನಗಳಲ್ಲಿ ಮೌಡ್ಯವಾಗಿದ್ದು, ಅದು ತಮ್ಮ ವ್ಯವಸ್ಥೆಯೊಳಗಿರಬೇಕಾಗಿದೆಯೇ ಹೊರತು ದೇಶದ ಸನಾತನ ಹಿಂದೂ ಧರ್ಮದ ಮೇಲೆ ದಾಳಿಯನ್ನು ನೋಡಿ ಮೌನವಾಗಿ ಕುಳಿತುಕೊಳ್ಳುವಂತಹ ಪ್ರಮೇಯ ಬರಬಾರದು, ಇಂತಹ ಸನ್ನಿವೇಶದಲ್ಲಿ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾದರೆ ಮಾತ್ರ ಹಿಂದೂ ಸಂಗಮ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದ ಶ್ರೀಗಳು ಕೇಸರಿ ತ್ಯಾಗದ ಸಂಕೇತವಾದರೆ, ಭಾರತ ಸನಾತನ ಸಂಸ್ಕೃತಿಯ ಭಾಗವಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷಗಳನ್ನು ಪೂರೈಸಿರುವುದು ಯೋಚನೀಯವಾಗಿದ್ದು, ಹಿಂದೂ ಧರ್ಮದ ಸಂಸ್ಕೃತಿಯ ಬಿಂಬಿಸುವ ಕಾರ್ಯಕ್ರಮಗಳು ಸಂಘಟನೆಗೆ ಸಾಕ್ಷಿಯಾಗಿವೆ, ಭಜನೆಯನ್ನು ಉಳಿಸುವ ಕಾರ್ಯ ಪ್ರತಿ ಮನೆಯ ಮೂಲಕ ಆಗಬೇಕಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ., ಭಾರತ ಮಾತೆಗೆ ಪುಷ್ಪಾರ್ಚನೆಗೈದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದುತ್ವ ಅಂದರೆ ಹಿಂದೂವಿನ ಒಂದು ಐಡೆಂಟಿಟಿ, ಭಾರತದ ಆತ್ಮ ಹಿಂದುತ್ವ, ಧರ್ಮ ಎಂದರೆ ಸ್ವಭಾವ, ಜೀವನ ಪದ್ದತಿ ವಸುದೈವಕುಟುಂಬವೇ ಧರ್ಮ ಎಂದು ಹೇಳಿದರು.

ಶ್ರೇಷ್ಠ ಜೀವನ ಪದ್ದತಿ ಭಾರತದ್ದಾಗಿದ್ದು, ಇಂದಿಗೂ ಜಗತ್ತಿನ ಯಾವ ದೇಶಕ್ಕೂ ಹೋದರೂ ಹಿಂದೂಸ್ತಾನಿ ಎಂಬ ಪದದಿಂದ ಕರೆಯಲಾಗುತ್ತಿದ್ದರೆ ಭಾರತದ ಧರ್ಮ ಹಿಂದುತ್ವವಾಗಿದೆ ಎಂದು ಹೇಳಿದ ಅವರು ಹಿಂದೂ ಧರ್ಮದ ಪಾಲನೆ ಮತ್ತು ಅನುಸರಣೆ ಹೆಚ್ಚಾಗಬೇಕಾಗಿದೆ ಎಂದು ಹೇಳಿದರು.

ಬಜಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯೋಗ ಶಿಕ್ಷಕಿ ಶಶಿಕಲ ಉಪಸ್ಥಿತರಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಶುಭಹಾರೈಸಿದರು.

ಇದಕ್ಕು ಮುನ್ನ ವಾಮದಪದವು ಮತ್ತು ಇರ್ವತ್ತೂರಿನಿಂದ ಆರಂಭವಾದ ಶೋಭಾಯಾತ್ರೆ ಶ್ರೀನಿವಾಸ ನಗರದ ಮೈದಾನದಲ್ಲಿ ಸಂಪನ್ನಗೊಂಡಿತು. ಭಾರತ ಮಾತೆಯ ವೇಷಧಾರಿ, ಸ್ತಬ್ದಚಿತ್ರ, ಮಹಾಪುರುಷರ ವೇಷಧಾರಿಗಳು, ನೃತ್ಯ ಭಜನೆ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.

ವಾಮದಪದವು ನಗರ ಕೇಸರಿಮಯಗೊಂಡಿತ್ತು. ಸಾಮೂಹಿಕ ಭಜನಾ ಸಂಕೀರ್ತನೆ, ಬಾಲಗೋಕುಲ ಮತ್ತು ಸ್ಥಳೀಯ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಪುಸ್ತಕ ಭಂಡಾರ, ಗೋ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಜೋಡಿಸಲಾಗಿತ್ತು. ತಾಲೂಕು ಸಂಯೋಜಕಿ ಸುಲೋಚನ ಜಿ.ಕೆ. ಭಟ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಪುರುಷೋತ್ತಮ ಶೆಟ್ಟಿ ವಾಮದಪದವು ವಂದಿಸಿದರು. ನಾಗರಾಜ್ ಶೆಟ್ಟಿ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article