ಹಿಂದು ಪೂರ್ಣ ಪ್ರಮಾಣದಲ್ಲಿ ಜಾಗೃತನಾದಾಗ ಹಿಂದುತ್ವದ ಅಸ್ತಿತ್ವ ಸದೃಢವಾಗುತ್ತದೆ: ಆನೆಗುಂದಿಶ್ರೀ

ಹಿಂದು ಪೂರ್ಣ ಪ್ರಮಾಣದಲ್ಲಿ ಜಾಗೃತನಾದಾಗ ಹಿಂದುತ್ವದ ಅಸ್ತಿತ್ವ ಸದೃಢವಾಗುತ್ತದೆ: ಆನೆಗುಂದಿಶ್ರೀ


ಶಿರ್ವ: ಭಾರತದ ಎಲ್ಲಾ ಕಡೆಗಳಲ್ಲೂ ಹಿಂದುಗಳು ಜಾಗೃತರಾಗುತ್ತಿದ್ದಾರೆ. ಜಾತಿ,ಮತದ ಪ್ರಭಾವ ಕಡಿಮೆಯಾಗುತ್ತದೆ. ನಾವು ಜಾಗೃತರಾಗಿ ರಾಷ್ಟ್ರ ಜೀವನವನ್ನು ಅಳವಡಿಸಿಕೊಳ್ಳಬೇಕು. ನಮ್ಮ ನಡೆನುಡಿ ಆಚರಣೆಯಲ್ಲಿ ಹಿಂದುತ್ವ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಹೆಸರಿಡುವಲ್ಲಿ ಹಿಂದುತ್ವಕ್ಕೆ ಪೂರಕವಾದ ಹೆಸರಿಡಬೇಕು. ಧಾರ್ಮಿಕ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆ, ಮಕ್ಕಳಿಗೂ ನಮ್ಮ ಸಂಪ್ರದಾಯ ಕಲಿಸಿ. ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಮನೆಯಿಂದಲೇ ಆಗಬೇಕು. ಹಿಂದು ಪೂರ್ಣ ಪ್ರಮಾಣದಲ್ಲಿ ಜಾಗೃತನಾದಾಗ ಹಿಂದುತ್ವದ ಅಸ್ತಿತ್ವ ಸದೃಢವಾಗುತ್ತದೆ ಎಂದು ಕುತ್ಯಾರು ಶ್ರೀ ಆನೆಗುಂದಿ ಮಹಾ ಸಂಸ್ಥಾನದ ಅನಂತಶ್ರೀ ವಿಭೂಷಿತ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳು ನುಡಿದರು.

ಅವರು ಭಾನುವಾರ ಕುತ್ಯಾರು ಶ್ರೀಪರಶುರಾಮೇಶ್ವರ ಕ್ಷೇತ್ರದ ಭಾರ್ಗವ ಭವನದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಾಪು ತಾಲೂಕು ವ್ಯಾಪ್ತಿಯ ಕುತ್ಯಾರು, ಕಳತ್ತೂರು, ಪಿಲಾರು, ಸಾಂತೂರು ಗ್ರಾಮಗಳನ್ನು ಒಳಗೊಂಡ ಕುತ್ಯಾರು ಮಂಡಲದ ‘ಹಿಂದೂ ಸಂಗಮ’ದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ರಾಜ್ಯ ದೇವಸ್ಥಾನ ಸಂವರ್ಧನ ಸಮಿತಿಯ ರಾಜ್ಯ ಸಂಚಾಲಕ ಮನೋಹರ ಮಠದ್ ಮಾತನಾಡಿ ಸಜ್ಜನರ ನಿಷ್ಕ್ರೀಯತೆಯಿಂದ ದುರ್ಜನರು ಸಕ್ರೀಯರಾಗಿದ್ದಾರೆ. ಈ ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಕ್ರಾಂತಿ ಆಗಬೇಕು. ಜಾತಿ, ಮತ, ಪಕ್ಷ ಮರೆತು ಒಂದಾದಾಗ ಕಾರ್ಯ ಆಗುತ್ತದೆ. ನಮ್ಮದು ಸಂಘರ್ಷದ ಇತಿಹಾಸ. ಅನೇಕ ಸಾಧು ಸಂತರು, ದೇಶಭಕ್ತರು ಮಾಡಿದ ಹೋರಾಟದ ಫಲವಾಗಿ ಅಯೋಧ್ಯೆಯ ರಾಮ ಮಂದಿರ ಆಗಿದೆ. ಯಾವುದೇ ಕೆಲಸವೂ ಅಸಾಧ್ಯವಲ್ಲ. ಅನೇಕ ದೇಶಭಕ್ತರ, ಕ್ರಾಂತಿಕಾರರ ತ್ಯಾಗ, ಬಲಿದಾನದಿಂದ ನಮ್ಮ ಇಂದಿನ ಅಸ್ತಿತ್ವ ಉಳಿದಿದೆ. ಅನಾದಿ ಕಾಲದಿಂದಲೂ ಬಂದ ಶಾಶ್ವತ ಸತ್ಯವನ್ನೇ ಹೇಳುತ್ತಿದ್ದೇವೆ, ಹಿಂದೂ ಧರ್ಮ ಜಗತ್ತಿನ ಕಲ್ಯಾಣವನ್ನು ಬಯಸುತ್ತದೆ, ಸಮಾಜಕ್ಕೆ ಶಕ್ತಿ ಇದೆ. ಸಜ್ಜನ ಶಕ್ತಿ ಜಾಗೃತ ಆಗಬೇಕು. ಆತ್ಮ ಜ್ಯೋತಿ ಜಾಗೃತ ಆಗಬೇಕು ಎಂದರು.

ಆಯೋಜನಾ ಸಮಿತಿಯ ಕಾಪು ತಾಲೂಕು ಉಪಾಧ್ಯಕ್ಷ ಜಿನೇಶ್ ಬಲ್ಲಾಳ್ ಕುತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪವನ್ ಕುಮಾರ್ ಸ್ವಾಗತಿಸಿದರು. ಕುತ್ಯಾರು ಮಂಡಲ ಸಂಚಾಲಕ ಸಾಯಿನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೀಪಾ ಕುತ್ಯಾರು ವೈಯುಕ್ತಿಕ ಗೀತೆ ಹಾಡಿದರು. ಪ್ರವೀಣ್ ಆಚಾರ್ಯ ನಿರೂಪಿಸಿದರು. ಮಾನುಷ್ ವಂದಿಸಿದರು.

ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಅನೇಕ ಗಣ್ಯರು, ಸಾವಿರಕ್ಕೂ ಅಧಿಕ ಹಿಂದೂ ಬಂಧುಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article