ಅಮ್ಟಾಡಿ ಮಕ್ಕಳ ಹಾಗೂ ಮಹಿಳಾ ಗ್ರಾಮಸಭೆ
Wednesday, January 7, 2026
ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ಹಕ್ಕು ಹಾಗೂ ಮಹಿಳಾ ಗ್ರಾಮ ಸಭೆ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಅಮ್ಟಾಡಿ ಸಭಾಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಮೋಹಿನಿ, ಪಂಜಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಜೀವನ್ ಶೆಟ್ಟಿ, ಪಂಚಾಯತ್ ಆಭಿವೃಧ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಅಂಗನವಾಡಿ ಮೇಲ್ವಿಚಾರಕಿ ಶೋಭಾ, ಕಾರ್ಯದರ್ಶಿ ನಿತ್ಯಾನಂದ ಕೆ., ಲೆಕ್ಕ ಸಹಾಯಕಿ ರೇವತಿ, ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಅಮ್ಟಾಡಿ ಉಪ ಆರೋಗ್ಯ ಕೇಂದ್ರದ ಶಿವಪ್ರಸಾದ್, ಕುರಿಯಾಳ ಉಪ ಆರೋಗ್ಯ ಕೇಂದ್ರದ ಜೋಸ್ಲಿನ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎಂಬಿಕೆ, ಎಲ್‌ಸಿಆರ್‌ಪಿ, ವಿಆರ್‌ಡಬ್ಲ್ಯು, ಕೃಷಿಸಖಿ, ಪಶು ಸಖಿಯರು, ಸ್ವಸಹಾಯ ಸಂಘದ ಸದಸ್ಯರು, ನಲ್ಕೆಮಾರ್ ಶಾಲೆ ಹಾಗೂ ಲೋರೆಟ್ಟೋ ಶಾಲೆಯ ಮಕ್ಕಳು ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.