ರಿಕ್ಷಾ ಚಾಲಕನಿಗೆ ಬೆದರಿಕೆ
ಬಂಟ್ವಾಳ: ಬಿ ಕಸಬಾ ಗ್ರಾಮದ ಲೊರೆಟ್ಟೊ ಬಾರೆಕಾಡು ಎಂಬಲ್ಲಿ ರಿಕ್ಷಾ ಚಾಲಕನೋರ್ವನಿಗೆ ಕಾರಿನಲ್ಲಿ ಬಂದ ವ್ಯಕ್ತಿಗಳಿಬ್ಬರು ಅವಾಛ್ಯವಾಗಿ ನಿಂದಿಸಿ ಜೀವಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.
ಈ ಬಗ್ಗೆ ರಿಕ್ಷಾ ಚಾಲಕ, ಅರಳಗ್ರಾಮದ ಧನುಷ್ ಎಂಬವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾರೆಕಾಡಿನಲ್ಲಿ ರಿಕ್ಷಾ ನಿಲ್ಲಿಸಿ ಮೂತ್ರ ಶಂಕೆ ಮಾಡುವ ವೇಳೆ ಸೋರ್ನಾಡು ಕಡೆಯಿಂದ ಒಂದು ಕಾರು ಬಂದು ಏಕಾಏಕಿ ಅಡ್ಡ ನಿಲ್ಲಿಸಿದ್ದು, ಕಾರಿನಿಂದ ಇಬ್ಬರು ಇಳಿದು ರಿಕ್ಷಾ ನಿಲ್ಲಿಸುವಂತೆ ತಾಕೀತುಮಾಡಿದ್ದು, ಇಬ್ಬರ ಪೈಕಿ ಒಬ್ಬನ ಕೈಯಲ್ಲಿ ತಲವಾರು ಇರುವುದನ್ನು ಗಮನಿಸಿ ಜೀವ ಭಯದಿಂದ ರಿಕ್ಷಾವನ್ನು ವಾಪಸ್ ತೆರಳಲು ತಿರುಗಿಸಿದಾಗ ಅಪರಿಚಿತರಿಬ್ಬರು ರಿಕ್ಷಾವನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದಲ್ಲದೆ ಅವ್ಯಾಚವಾಗಿ ಬೈದಿದ್ದಾರೆ. ಇದರಿಂದ ಭಯಬೀತನಾಗಿ ರಿಕ್ಷಾವನ್ನು ಸ್ಟಾರ್ಟ್ ಮಾಡಿ ವಾಪಸ್ ಮನೆಗೆ ಹೋಗಿರುತ್ತೇನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.