ರಾಷ್ಟ್ರೀಯ ಮಟ್ಟದ ಟೆನ್ನಿಸ್ ಸ್ಪರ್ಧಾ ಕೂಟಕ್ಕೆ ಆಯ್ಕೆ
Friday, January 23, 2026
ಮಂಗಳೂರು: ರಾಷ್ಟ್ರೀಯ ಮಟ್ಟದ ಟೆನ್ನಿಸ್ ಸ್ಪರ್ಧಾ ಕೂಟಕ್ಕೆ ನಗರದ ಡಾ. ಎನ್.ಎಸ್.ಎ.ಎಮ್, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಾಪ್ತಿ ಶೆಟ್ಟಿ, ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದ್ರುವ ಎಮ್. ರಾವ್ ಅವರು ದ.ಕ. ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಶಿಕ್ಷಣಾ ನಿರ್ದೇಶನಾಲಯ ನವದೆಹಲಿ ಸಂಸ್ಥೆಯ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ 19ರ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ಟೆನ್ನಿಸ್ ಸ್ಪರ್ಧಾ ಕೂಟವನ್ನು ನವದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ಜ.29 ರಂದು ಆಯೋಜಿಸಲಾಗಿದ್ದು, ಈ ಸ್ಪರ್ಧಾ ಕೂಟವನ್ನು ಸ್ಕೂಲ್ ಗೇಮ್ಸ್ ಫೆಡರೇಷನ್ ಓಫ್ ಇಂಡಿಯಾ, ಲಕ್ನೋ ಸಂಸ್ಥೆಯು ಸಂಘಟಿಸಿದೆ.
ಇವರು ನಗರದ ರಾಮಕೃಷ್ಣ ಟೆನ್ನಿಸ್ ಕ್ಲಬ್‌ನ ಸದಸ್ಯರಾಗಿದ್ದು, ಖ್ಯಾತ ಟೆನ್ನಿಸ್ ತರಬೇತುದಾರರಾದ ಶುಭಂ ಮಿಶ್ರ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯದಿಂದ ಕೇವಲ 5 ಕ್ರೀಡಾಪಟುಗಳು ಈ ಸ್ಪರ್ಧಾಕೂಟಕ್ಕೆ ಆಯ್ಕೆಯಾಗಿದ್ದಾರೆ.