ತರಕಾರಿ ಮತ್ತು ನರ್ಸರಿ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜಯ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಸರಿನಲ್ಲಿ ಸೂಚಿಸಿದಂತೆ ಯೋಜನೆಯ ಮೂಲ ಉದ್ದೇಶವೇ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ‘ಉನ್ನತಿಯನ್ನು ತರುವುದಾಗಿದೆ. ಈ ತರಬೇತಿಯು ಕೌಶಲವನ್ನು ನೀಡುವ ಮೂಲಕ ಉದ್ಯೋಗದಾತರನ್ನಾಗಿ ಮಾಡುವ ಗುರಿ ಹೊಂದಿದೆ. ಇಲ್ಲಿ ಕಲಿತ ಪ್ರತಿಯೊಂದು ಅಂಶವೂ ನಿಮ್ಮ ಕೈಹಿಡಿಯಲಿದೆ ಎಂದು ಹೇಳಿದರು.
ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕರಾದ ಶಕುಂತಲಾ ಮಾತನಾಡಿ, ಉನ್ನತಿ ತರಬೇತಿಯು ಒಟ್ಟು 12 ದಿನಗಳ ಕಾಲ ನಡೆಯಲಿದ್ದು, ಶಿಬಿರಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕು ಎನ್.ಆರ್.ಎಲ್.ಎಂ. ಕಾರ್ಯಕ್ರಮ ವ್ಯವಸ್ಥಾಪಕರಾದ ಸುಧಾ, ಹಿರಿಯ ತರಬೇತುದಾರರಾದ ಕರುಣಾಕರ ಜೈನ್, ಸಂಸ್ಥೆಯ ಸಿಬ್ಬಂದಿಗಳಾದ ಕಾಶ್ಮೀರ್ ಡಿಸೋಜ, ಪ್ರವೀಣ್, ತಾಲೂಕು ನರೇಗಾ ಐಇಸಿ ಸಂಯೋಜಕರಾದ ರಾಜೇಶ್, ತಾಲೂಕು ಎನ್.ಆರ್.ಎಲ್.ಎಂ. ಕೃಷಿ ವ್ಯವಸ್ಥಾಪಕರಾದ ಸಾಂಘವಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ತಾಲೂಕು ಎನ್.ಆರ್.ಎಲ್.ಎಂ. ವ್ಯವಸ್ಥಾಪಕ ಪ್ರದೀಪ್ ಕಾಮತ್ ಸ್ವಾಗತಿಸಿ, ಪ್ರೀತಿಕಾ ಪ್ರಾರ್ಥಿಸಿದರು. ತಾಲೂಕು ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.