ಭೂಮಿ ಮಂಜೂರಾತಿಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮನವಿ
ಬಂಟ್ವಾಳ: ತಾಲೂಕಿನ ಕೊರಗ ಸಮುದಾಯದ ಕುಟುಂಬಗಳಿಗೆ ಕೃಷಿ ಭೂಮಿ ಹಾಗೂ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಮಂಜೂರಾತಿಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಕೊರಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಲಲಿತಾ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಮಘಟನೆಯ ಮೂಲಕ ಸಮುದಾಯದ ಸಭೆಗಳನ್ನುನಡೆಸಿ ಸಾಮೂಹಿಕವಾಗಿ ಭೂರಹಿತರಿಂದ ೧೮ ದರ್ಖಾಸು ಅರ್ಜಿ ಸಲ್ಲಿಸಿದ್ದು, ಎರಡು ವರ್ಷ ಕಳೆದರೂ ಒಂದೇ ಒಂದು ಕುಟುಂಬಕ್ಕೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅದೇ ರೀತಿ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ 2014 ರಲ್ಲಿ ಸ.ನಂ.44-1ಎಪಿ2 ರಲ್ಲಿ 0.11 ಎಕ್ರೆ ಸ್ಥಳವನ್ನು ಕಾದಿರಿಸಲಾಗಿದ್ದರೂ, ಈ ಸ್ಥಳವನ್ನು ಈವರೆಗೂ ಐಟಿಡಿಪಿ ಇಲಾಖೆ ಹೆಸರಿಗೆ ಆರ್‌ಟಿಸಿ ಅಗಿರುವುದಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಹಾಗಾಗಿ ಡಿ.ಸಿ.ಮನ್ನಾ ಭೂಮಿ ಮತ್ತು ಕಂದಾಯ ಭೂಮಿ ಡೀಮ್ಡ್ ಫಾರೆಸ್ಟ್ ನಿಂದ ತೆರವಾದ ಭೂಮಿಯನ್ನು ಗುರುತಿಸಿ 18 ಕುಟುಂಬಕ್ಕೆ ಕೃಷಿ ಭೂಮಿ ಹಕ್ಕಪತ್ರ ನೀಡಬೇಕು ಹಾಗೂ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ ಐಟಿಡಿಪಿ ಹೆಸರಿಗೆ ಭೂಮಿಯ ಆರ್‌ಟಿಸಿ ಮಾಡಿಕೊಡುವಂತೆ ಒತ್ತಾಯಿಸಲಾಗಿದೆಮುಂದಿನ 15 ದಿನದ ಒಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಜ.27 ರಂದುಆಹೋರಾತ್ರಿ ಧರಣಿ ನಡೆಸಲಾಗುವು?ಉ ಎಂದು ಎಚ್ಚರಿಕೆ ನೀಡಿದ್ದಾರೆ.