ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ವತಿಯಿಂದ ಸ್ವಚ್ಛತಾ ಶ್ರಮದಾನ
Tuesday, January 6, 2026
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಬಾಳ್ತಿಲ ಒಕ್ಕೂಟದ ಸದಸ್ಯರ ಸಹಕಾರದೊಂದಿಗೆ ಸುಧೆಕಾರ್ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ಸಾನಿಧ್ಯದಲ್ಲಿ ನಡೆಯುವ ನೇಮೋತ್ಸವ ನಿಮಿತ್ತ ಹಾಗೂ ಮಕರಸಂಕ್ರಾಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ದೈವ ಸಾನಿಧ್ಯದ ಒಳಾಂಗಣಕ್ಕೆ ಸೆಗಣಿ ಸಾರಣೆ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ದೈವ ಸಾನಿಧ್ಯದ ಮುಖ್ಯಸ್ಥರಾದ ದಾಮೋದರ ಶೆಟ್ಟಿ, ಸಾನಿಧ್ಯದ ಉಸ್ತುವಾರಿ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದು, ಸ್ವಚ್ಛತಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು.
ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಬಾಳ್ತಿಲ ಒಕ್ಕೂಟದ ಸದಸ್ಯರುಗಳು, ದೈವಸ್ಥಾನದ ಭಕ್ತಾದಿಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು.
ನಂತರ ಶಬರಿ 20 ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಶೌರ್ಯ ತಂಡದ ಮಾಸಿಕ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.