ಕಿಂಡಿ ಅಣೆಕಟ್ಟಿನಿಂದ ಕೃಷಿ ನೀರಾವರಿಗೆ ಕಾಲುವೆ ನಿರ್ಮಾಣಕ್ಕೆ ಶಿಲಾನ್ಯಾಸ
Tuesday, January 6, 2026
ಉಜಿರೆ: ಬಡಗಕಾರಂದೂರು( ಅಳದಂಗಡಿ) ಗ್ರಾಮದ ಫಲ್ಗುಣಿ ನದಿಯ ಬಾವಲಿಗುಂಡಿ ಎಂಬಲ್ಲಿರುವ ಕಿಂಡಿ ಅಣೆಕಟ್ಟಿನಿಂದ ಪಶ್ಚಿಮದ ಕಡೆಗಿನ ಸೂಳಬೆಟ್ಟು ವಾಳ್ಯದವರ ಕೃಷಿ ನೀರಾವರಿಗೆ ಅನುಕೂಲವಾಗಲೆಂದು ಕಾಲುವೆ ನಿರ್ಮಾಣಕ್ಕೆ ರಾಜ್ಯದ ಸಣ್ಣ ನೀರಾವರಿ ಇಲಾಖೆಯಿಂದ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಲುವೆ ನಿರ್ಮಾಣ ಕಾರ್ಯದ ಪೂರ್ವಭಾವಿಯಾಗಿ ಜ.6 ರಂದು ಬಾವಲಿಗುಂಡಿ ಪರಿಸರದಲ್ಲಿ ಶಿಲಾನ್ಯಾಸ ನಡೆಯಿತು.
ಅನುದಾನ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಕಾಮಗಾರಿಗೆ ಚಾಲನೆ ನೀಡಿದರು.
ಅಳದಂಗಡಿ ಗ್ರಾ.ಪಂ. ಸದಸ್ಯ ಪ್ರವೀಣ, ಬಳಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ, ಸ್ಥಳೀಯರಾದ ಮುರಲೀಧರ ಗೋಖಲೆ, ಪ್ರಭಾಕರ ಆಠವಳೆ, ನಿರಂಜನ ಜೋಶಿ, ರಾಜೇಂದ್ರ ಗೋಖಲೆ, ಅಮರೇಶ ಜೋಶಿ, ಪ್ರಶಾಂತ ನಾತು, ಲೋಲಾಕ್ಷ ಶೆಟ್ಟಿ ಪಡ್ಯೋಡಿ, ಸದಾನಂದ ಪೂಜಾರಿ ಉಂಗಿಲ ಬೈಲು, ಕಟ್ಟೂರು ಶಿವ ಭಟ್, ಶಂಕರ ಭಟ್, ಸಂತು, ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ವಸಂತ ಪೂಜಾರಿ ಉಪಸ್ಥಿತರಿದ್ದರು. ಪತ್ರಕರ್ತ ದೀಪಕ ಆಠವಳೆ ಸ್ವಾಗತಿಸಿ, ವಂದಿಸಿದರು.
ಇದೇ ವೇಳೆ ಸ್ಥಳೀಯರು, ಬಳಂಜವನ್ನು ಸಂಪರ್ಕಿಸುವ ನಡಾಯಿ-ಆನೆಪಿಲ ಮಣ್ಣಿನ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.