ಬೆಳ್ಳಾರೆ ಪವಿತ್ರ ಶಿಲುಬೆಯ ಚರ್ಚ್‌ನಲ್ಲಿ ಬಲಿಪೂಜೆ, ಕ್ರಿಸ್‌ಮಸ್ ಆಚರಣೆ
Sunday, January 4, 2026
ಬೆಳ್ಳಾರೆ: ಪ್ರಪಂಚದಾದ್ಯಂತ ಆಚರಿಸಲ್ಪಡುವ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬೆಳ್ಳಾರೆಯ ಪವಿತ್ರ ಶಿಲುಬೆಯ ಚರ್ಚ್‌ನಲ್ಲಿ ಡಿ.24 ರಂದು ಸಂಜೆ 6.30ಕ್ಕೆ ಕ್ಯಾರಲ್ಸ್ ಗಾಯನದೊಂದಿಗೆ ಸಂಭ್ರಮ ಆರಂಭವಾಯಿತು ಮತ್ತು 7 ಗಂಟೆಗೆ ದಿವ್ಯ ಬಲಿಪೂಜೆ ಮತ್ತು ಕ್ರಿಸ್‌ಮಸ್ ಸಂದೇಶ ಕಾರ್ಯಕ್ರಮ ನಡೆಯಿತು.
ಪವಿತ್ರ ಶಿಲುಬೆಯ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೇರೊರವರು ಬಲಿಪೂಜೆ ನೆರವೇರಿಸಿದರು.
ಬಲಿಪೂಜೆಯ ನಂತರ, ರಾತ್ರಿ 8.15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ಉಪ್ಪಿನಂಗಡಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ವಿನ್ಸೆಂಟ್ ಫೆರ್ನಾಂಡಿಸ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಲಕ್ಕಿ ಗೇಮ್ಸ್ ಅದೃಷ್ಟದ ಆಟಗಳನ್ನು ಆಯೋಜಿಸಲಾಗಿತ್ತು. ಸಾಂತಾ ಕ್ಲಾಸ್ ಆಗಮನ ಎಲ್ಲರಲ್ಲೂ ಸಂಭ್ರಮ ಮೂಡಿಸಿತು. ಎಲ್ಲರಿಗೂ ಕ್ರಿಸ್‌ಮಸ್ ಸಿಹಿತಿಂಡಿ ಮತ್ತು ಚಹಾವನ್ನು ವಿತರಿಸಲಾಯಿತು.
ರಾತ್ರಿ 9.30ರ ಸುಮಾರಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈ ಸಂಭ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಜನರು ಪರಸ್ಪರ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಒಟ್ಟಾರೆಯಾಗಿ ಇದೊಂದು ಅದ್ಭುತ ಆಚರಣೆಯಾಗಿತ್ತು.
