ರೈತ ಕಾರ್ಮಿಕ ವಿರೋಧಿ ಸಂಹಿತೆಗಳು,ಮಸೂದೆಗಳಿಂದ ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿ: ಕೆ. ಯಾದವ ಶೆಟ್ಟಿ
ಅವರು ಬೆಳ್ತಂಗಡಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಜರುಗುವ ನಾಲ್ಕು ದಿನಗಳ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರದ ರೈತ- ಕಾರ್ಮಿಕ ವಿರೋದಿ ದೋರಣೆಯ ಖಂಡಿಸಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಪೆಬ್ರವರಿ12 ರಂದು ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರವನ್ನು ಬೆಂಬಲಿಸಿ ಈ ಪಾದಯಾತ್ರೆ ಗಳನ್ನು ನಡೆಸಲಾಗುತ್ತಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಸಿಐಟಿಯು ದ.ಕ. ಜಿಲ್ಲಾ ಅಧ್ಯಕ್ಷರಾದ ಬಿ.ಎಂ.ಭಟ್ ರವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ ವಿರೋದಿ, ರೈತ ವಿರೋದಿ ಮಾತ್ರವಲ್ಲ ಭಾರತೀಯ ಪ್ರಜೆಗಳ ವಿರೋದಿ ಸರಕಾರವಾಗಿದೆ. ಕಾರ್ಮಿಕರಿಗೆ ಇರುವ ಸಂಘ ಕಟ್ಟುವ ಹಕ್ಕು, ಅನ್ಯಾಯದ ವಿರುದ್ದ ಪ್ರತಿಭಟಿಸುವ ಹಕ್ಕು, ನ್ಯಾಯ ವೇತನ, ಸಮಾನ ವೇತನ, ಕೆಲಸದ ಮತ್ತು ಶಿಕ್ಷಣದ ಹಕ್ಕು ಮೊದಲಾದ ಸಂವಿಧಾನ ಬಧ್ದ ಹಕ್ಕುಗಳನ್ನೇ ಇಲ್ಲವಾಗಿಸಿದೆ. ಕಾರ್ಮಿಕರು ತ್ಯಾಗ ಬಲಿದಾನಗಳ ಹೋರಾಟಗಳಿಂದ ಪಡೆದ ಕಾನೂನುಗಳನ್ನು ರದ್ದು ಪಡಿಸಿದ ಮೋದಿ ಸರಕಾರ ಮಾಲಕರ ಪರವಾದ ಸಂಹಿತೆಗಳನ್ನು ಜಾರಿ ಮಾಡಿದೆ. ಈ ಸಂಹಿತೆಗಳನ್ನು ಹಿಂಪಡೆಯುವವರೆಗೆ, ರದ್ದು ಪಡಿಸಿದ ನಮ್ಮ ಹಕ್ಕುಗಳ 29 ಕಾನೂನುಗಳ ಮರು ಸ್ಥಾಪಿಸುವವರೆಗೆ ನಮ್ಮ ಹೋರಾಟ ನಿಲ್ಲದು. ಸಾವರ್ಕರ್ ಬ್ರಿಟೀಶರ ಬೂಟು ನೆಕ್ಕಿ ಸ್ವಾತಂತ್ರಚಳವಳಿಗೆ ದ್ರೋಹ ಬಗೆದು ಭಾರತೀಯರಿಗೆ ಅವಮಾನ ಮಾಡಿದ್ದರೆ ಇಂದು ನರೇಂದ್ರ ಮೋದಿ ಅದಾನಿ ಅಂಬಾನಿಯವರ ಕಾಲಿಗೆ ಬಿದ್ದಿದ್ದು ಕಾರ್ಮಿಕ ವರ್ಗಕ್ಕೆ ದ್ರೊಹ ಎಸಗಿದ್ದಾರೆ ಎಂದರು.
ಮೊದಲಿಗೆ ಜಾಥಾ ತಂಡದ ನಾಯಕಿ ಈಶ್ವರಿ ಪದ್ಮುಂಜ ಸ್ವಾಗತಿಸಿದರೆ, ಕೊನೆಯಲ್ಲಿ ಜಯಶ್ರೀ ವಂದಿಸಿದರು. ಪಾದಯಾತ್ರೆಯ ನೇತ್ರತ್ವವನ್ನು ಶ್ಯಾಮರಾಜ್, ಲೋಲಾಕ್ಷಿ ಬಂಟ್ವಾಳ, ಪುಷ್ಪ, ಧನಂಜಯ, ಅಭಿಷೇಕ್, ಅಧಿತಿ, ಫಾರೂಕ್, ಸುಕುಮಾರ್, ಅಶ್ವಿತ, ಲತಾ ಪುತ್ತೂರು, ಕುಮಾರಿ, ಅಜಿ.ಎಂ.ಜೋಸ್, ಸಲಿಮೋನ್, ಪ್ರದೀಪ್ ಕಳೆಂಜ, ನಜೀರ್, ಮೊದಲಾದವರು ವಹಿಸಿದ್ದರು. ಬಳಿಕ ಪಾದಯಾತ್ರೆ ಮಂಗಳುರು ಕಡೆ ಸಾಗಿತು.ಜನವರಿ 29ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ನಗರದ ಅಂಬೇಡ್ಕರ್ ವೃತ್ತಕ್ಕೆ ತಲುಪಲಿರುವ ಈ ಪಾದಯಾತ್ರೆಯ ಜೊತೆಗೆ ಮೂಡಬಿದ್ರೆ ತಲಪಾಡಿ ಮುಲ್ಕಿಯ ಪಾದಯಾತ್ರೆಗಳು ಸೇರಿ ಬಳಿಕ ಬೃಹತ್ ಮೆರವಣಿಗೆಯೊಂದಿಗೆ ಕ್ಲಾಕ್ ಟವರ್ ನತ್ತ ಹೆಜ್ಜೆ ಹಾಕಲಿದೆ.ನಂತರ ನಡೆಯುವ ಬಹಿರಂಗ ಸಭೆಯಲ್ಲಿ CITU ಕರ್ನಾಟಕ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಸುಂದರಂರವರು ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು CITU ಪ್ರಕಟಣೆ ತಿಳಿಸಿದೆ.