ಮುಡಿಪು ಗಣರಾಜ್ಯೋತ್ಸವ: ಮನೆ ಮನೆಯಲ್ಲಿ ಸಂವಿಧಾನ ಓದು ಅಭಿಯಾನ

ಮುಡಿಪು ಗಣರಾಜ್ಯೋತ್ಸವ: ಮನೆ ಮನೆಯಲ್ಲಿ ಸಂವಿಧಾನ ಓದು ಅಭಿಯಾನ


ಮುಡಿಪು: ಜನ ಶಿಕ್ಷಣ ಟ್ರಸ್ಟ್‌ನ ಜೀವನ್ ಮೂರ್ತಿ ಸರ್ವೋದಯ ಮಂಟಪದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮನೆ ಮನೆಯಲ್ಲಿ ಸಂವಿಧಾನ ಓದುವ ಅಭಿಯಾನ ಆರಂಭಿಸಿ ಮನೆ ಮಂದಿಗೆ ಸಂವಿಧಾನದ ಮಹತ್ವವನ್ನು ಮನವರಿಕೆ ಮಾಡಿಕೊಡುವುದರೊಂದಿಗೆ ನೆರೆ ಕರೆಯ ಬಂದು ಬಳಗ, ವಿದ್ಯಾರ್ಥಿ ಯುವಜನರಿಗೆ ಸಂವಿಧಾನದ ಆಶಯಗಳನ್ನು ತಿಳಿಸುವ ಸಂವಿಧಾನ ಓದು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ನರೇಗಾ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ, ಕಾರ್ಯ ನಿರತ ಸಮಾಜ ಕಾರ್ಯಕರ್ತರು ಮತ್ತು ಸ್ಮೈಲ್ ಸ್ಕಿಲ್ ವಿದ್ಯಾರ್ಥಿನಿಯರಿಗೆ ನ್ಯಾಯ ಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಬರೆದಿರುವ ಸಂವಿಧಾನ ಓದು ಪುಸ್ತಕಗಳನ್ನು ವಿತರಿಸಿ ಅಭಿಯಾನಕ್ಕೆ ಚಾಲನೆ ನೀಡಿ ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಮೂಲ ತತ್ವಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಿ ಬದುಕಲು ಕಲಿತರೆ ಪ್ರಜಾಪ್ರಭುತ್ವದ ಬಲವರ್ಧನೆ ಯೊಂದಿಗೆ ಗಾಂಧಿ ಕನಸಿನ ಅಂತ್ಯೋದಯ, ಸರ್ವೋದಯ ಸಾಧ್ಯ ಎಂದರು.

ಸಂವಿಧಾನವು ಭಾರತಿಯರನ್ನೆಲ್ಲ ಒಟ್ಟಿಗೆ ಮುನ್ನ ಡೆಸುತ್ತಿರುವ ಮಹಾ ಗ್ರಂಥವಾಗಿದೆ ಎಂದು ಟ್ರಸ್ಟ್ ನಿರ್ದೇಶಕರು ಅಭಿಪ್ರಾಯಪಟ್ಟರು. ಟ್ರಸ್ಟ್ ಸಂಯೋಜಕ ಚೇತನ್ ಕುಮಾರ್, ಶಿಕ್ಷಣ ಸಂಯೋಜಕ ಶಶಿಕಾಂತ್, ತರಬೇತಿದಾರಾದ ಫ್ಲೀಶಾ, ಪ್ರಜ್ಞಾ, ಜನನಿ, ಕಾವೇರಿ, ಕ್ಷೇತ್ರ ಸಂಯೋಜಕಿಯರಾದ ಲತಾ, ಕಾರ್ತಿಕ, ಶ್ವೇತ, ರೇಣುಕಾ, ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿಯರು ಸಂವಿಧಾನ ಓದುವ ಓದಿಸುವ ಅಭಿಯಾನದಲ್ಲಿ ಭಾಗವಹಿಸುವ ಪ್ರತಿಜ್ಞೆ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article