ರಾಜ ಕಾಲುವೆಗೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ
Sunday, January 25, 2026
ದೇರಳಕಟ್ಟೆ: ಅಂಬ್ಲಮೊಗರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 1975ರಲ್ಲಿ ನಿರ್ಮಿಸಿದ ಸೇತುವೆ ಈಗ ದುರಸ್ತಿ ಹಂತದಲ್ಲಿ ಇದೆ. 51 ವರ್ಷ ಹಳೆಯದಾದ ಈ ಸೇತುವೆ ಅಭಿವೃದ್ಧಿ ಮಾಡುವ ಉದ್ದೇಶ ಇದೆ. ಇಲ್ಲಿ ಹೊಸದಾಗಿ ನಿರ್ಮಾಣ ಆಗುವ ಸೇತುವೆ ಮಾದರಿ ಸೇತುವೆಯಾಗಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಅವರು ಲೋಕೋಪಯೋಗಿ ಇಲಾಖೆ ವತಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆಗಲಿರುವ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಾಡಿ ರಾಜ ಕಾಲುವೆ ಗೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಖತೀಬ್ ತಾಜುದ್ದೀನ್ ರಝಾ ಅಮ್ಜದಿ ದುಆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಮನ್ಸೂರ್ ಮಂಚಿಲ, ನಾಸೀರ್ ನಡುಪದವು, ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ, ಮಾಜಿ ಅಧ್ಯಕ್ಷ ಸತ್ತಾರ್, ಯೂಸುಫ್ ಬಾವ, ಹನೀಫ್, ನಾಸೀರ್ ನಡುಪದವು, ರವೂಫ್, ಹಸನ್, ಇಬ್ರಾಹಿಂ, ರಝಾಕ್, ಇಕ್ಬಾಲ್, ರವಿರಾಜ್, ಫಾರೂಕ್, ಕಬೀರ್, ಮುಸ್ತಫಾ ಮಲಾರ್, ಶರೀಫ್, ಅಬ್ದುಲ್ಲಾ, ಪುಷ್ಪಾ, ಚಂದ್ರಿಕಾ ರೈ, ಬೃಂದಾ ಪೂಜಾರಿ, ಇಂಜಿನಿಯರ್ ದಾಸ್ ಪ್ರಕಾಶ್ ಗುತ್ತಿಗೆದಾರ ಮೊಹಮ್ಮದ್ ಸರ್ಫರಾಜ್ ಉಪಸ್ಥಿತರಿದ್ದರು.