ಯುವ ಜನತೆಗೆ ಹಿಂದೂ ಧಮ೯ದ ಆಚರಣೆ ಮತ್ತು ಇತಿಹಾಸವನ್ನು ಪರಿಚಯಿಸಬೇಕು: ಪುಷ್ಪರಾಜ್ ಕುಂಪಲ
ಶಿರ್ತಾಡಿಯಲ್ಲಿ ಹಿಂದೂ ಸಂಗಮ
ಅವರು ಶಿರ್ತಾಡಿ ಅರ್ಜುನಾಪುರ ದೇವಸ್ಥಾನದಲ್ಲಿ ಭಾನುವಾರ ನಡೆದ ವಾಲ್ಪಾಡಿ, ಶಿರ್ತಾಡಿ, ಮೂಡುಕೊಣಾಜೆ ಗ್ರಾಮಗಳನ್ನು ಒಳಗೊಂಡ ಶಿರ್ತಾಡಿ ಮಂಡಲದ `ಹಿಂದೂ ಸಂಗಮ'ದಲ್ಲಿ ಬೌದ್ಧಿಕ್ ನೀಡಿದರು. ಸ್ವಾರ್ಥಕ್ಕಾಗಿ ಹಿಂದೂ ಸಮಾಜದೊಳಗಿರುವ ಜಾತಿಗಳನ್ನು ಒಡೆದು ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಕೆಲಸ ನಿರಂತರ ನಡೆಯುತ್ತಿರುವುದರಿಂದ ಯುವಜನತೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹಿಂದೂ ಧಮ೯ವನ್ನು ಪರಿಚಯಿಸುವುದು ಅಗತ್ಯವಿದೆ.
ಕರಿಂಜೆ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ತನ್ನ ನಾಗರಿಕತೆ, ಇತಿಹಾಸವನ್ನು ಅರಿತು ಪಾಲಿಸದ ಅನೇಕ ದೇಶಗಳು ಇತಿಹಾಸದಿಂದ ಕಣ್ಮರೆಯಾಗಿವೆ. ನಮ್ಮ ದೇಶದಲ್ಲೂ ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಮೇಲೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಯುತ್ತಿದ್ದು, ಹಿಂದೂ ಧರ್ಮಕ್ಕೆ ಹಾನಿಯಾಗಿದೆ. ಭವಿಷ್ಯದಲ್ಲಿ ಇದನ್ನು ತಡೆಗಟ್ಟಲು ಹಿಂದೂ ಬಾಂಧವರು, ಜಾತಿ ಪಂಗಡಗಳನ್ನು ಬದಿಗಿಟ್ಟು ಮುಂದಾಗಬೇಕು ಎಂದರು.
ಶಿರ್ತಾಡಿ ಸತ್ಯಸಾರಮಣಿ ಕ್ಷೇತ್ರದ ಮಾಜಿ ಅಧ್ಯಕ್ಷ ಗೋಪಾಲ ಶಿರ್ತಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಶಕೀನ, ಪಾಡ್ದನ ಹಾಡುಗಾರ್ತಿ ಗಿರಿಯಮ್ಮ, ಕಾಷ್ಠಶಿಲ್ಪಿ ಪ್ರಭಾಕರ ಆಚಾರ್ಯ, ನಾಟಿ ವೈದ್ಯೆ ಚಂದ್ರಾವತಿ, ಹಿರಿಯರಾದ ಶಶಿಧರ ದೇವಾಡಿಗ, ವಸಂತ ಕುಂದರ್ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಗೋಪೂಜೆ ನಡೆಯಿತು. ರಾಮ್ ಪ್ರಸಾದ್ ಮೂಡುಕೊಣಾಜೆ ಸ್ವಾಗತಿಸಿದರು. ನ್ಯಾಯವಾದಿ ಚಂದ್ರವರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.
ಶೋಭಾಯಾತ್ರೆ: ಬೃಹತ್ ಹಿಂದೂ ಸಂಗಮದ ವೈಭವದ ಶೋಭಾಯಾತ್ರೆಯು ಶಿತಾ೯ಡಿಯಿಂದ ಅಜು೯ನಾಪುರ ದೇವಸ್ಥಾನದವರೆಗೆ ನಡೆಯಿತು.
ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಶಿತಾ೯ಡಿಯಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಗಳನ್ನು ಅಪಿ೯ಸಿ, ತೆಂಗಿನಕಾಯಿಯನ್ನು ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆಯನ್ನು ನೀಡಿದರು.
ಅಜಿತ್ ಜೈನ್, ನಯನ್ ವಮಾ೯, ಅಣ್ಣಿ ಪೂಜಾರಿ, ನಿರಂಜನ್ ಜೈನ್, ಟಿ. ಕೆ. ವೆಂಕಟರಾವ್, ತಾಲೂಕಿನ ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಯೋಜಕರಾದ ಮಂಜುನಾಥ ಶೆಟ್ಟಿ, ಶಿತಾ೯ಡಿ ಮಂಡಲದ ಪ್ರಮುಖರಾದ ಸುಕೇಶ್ ಶೆಟ್ಟಿ ಎದಮಾರು, ಹರೀಶ್ಚಂದ್ರ ಕೆ.ಸಿ., ಲಕ್ಷ್ಮಣ್ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್ ಹನ್ನೇರು, ಸತೀಶ್ ಶೆಟ್ಟಿ ಶ್ರೀ ಬ್ರಹ್ಮ, ಪದ್ಮನಾಭ ಕೋಟ್ಯಾನ್, ಲತಾ ಹೆಗ್ಡೆ, ಅಕ್ಷಯ ಕುಮಾರ್, ಪ್ರವೀಣ್ ಕುಮಾರ್, ಗಣೇಶ್ ಬಿ. ಅಳಿಯೂರು,ಅಭಿಲಾಷ್ ಅಜು೯ನಾಪುರ, ಪ್ರವೀಣ್ ಕುಮಾರ್ ಅಜು೯ನಾಪುರ ಈ ಸಂದಭ೯ದಲ್ಲಿದ್ದರು.
ಯಧ್ವಿ ಹೆಚ್. ಕೆ. ಸಿ. ಭಗವದ್ಗೀತೆಯ ಶ್ಲೋಕಗಳನ್ನು ಸ್ತುತಿಸಿದರು.
ಶೋಭಾಯಾತ್ರೆಯಲ್ಲಿ ಪೂಣ೯ಕುಂಭ ಹಿಡಿದ ಮಹಿಳೆಯರು, ಕುಣಿತ ಭಜನಾ ತಂಡಗಳು, ಗೊಂಬೆ ಬಳಗ, ಹನುಮಂತ ವೇಷಧಾರಿ, ಯಕ್ಷಗಾನ ವೇಷಗಳು ಭಾಗವಹಿಸಿ ಮೆರುಗನ್ನು ನೀಡಿದವು.
