ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಭೆ
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಸ್ತಕಾಭಿಷೇಕ ಸಂದರ್ಭದಲ್ಲಿ ಕಾರ್ಕಳ ಸುತ್ತಮುತ್ತಲ ರಸ್ತೆ ಅಭಿವೃದ್ಧಿಗಾಗಿ 70 ಕೋಟಿ ಅನುಧಾನದ ಬೇಡಿಕೆಯನ್ನು ಅಭಯಚಂದ್ರ ಜೈನ್ ಮುಖಾಂತರ ರಾಜ್ಯ ಸರಕಾರಕ್ಕೆ ನೀಡಲಾಗುವುದು. 36 ಸಮಿತಿಗಳನ್ನು ರಚಿಸಲಾಗಿದ್ದು ಮಹಿಳೆಯರು ಕೂಡ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಲು ಮಹಿಳೆಯರ ಸಮಿತಿಯನ್ನು ಕೂಡ ರಚಿಸಲಾಗುವುದು ಮಾತ್ರವಲ್ಲದೆ ಪ್ರತಿಭೆಗೆ ಅನುಗುಣವಾಗಿ ಸಮಿತಿಗೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಕಾರ್ಕಳ ಗೊಮ್ಮಟಬೆಟ್ಟದಿಂದ ಆನೆಕೆರೆ ವರೆಗೆ, ಅನಂತಷಯನದಿಂದ ಗೊಮ್ಮಟ ಬೆಟ್ಟ ಹಾಗೂ ಸುತ್ತಮುತ್ತಲಿನ ಮುಖ್ಯ ರಸ್ತೆಗಳ ಅಗಲೀಕರಣ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮಠದ ಗೆಸ್ಟ್ ಹೌಸ್ ನವಿಕರಣ, ಯಾತ್ರಿ ನಿವಾಸದ ಅಭಿವೃದ್ಧಿ, ಯಾತ್ರಿ ನಿವಾಸದ ಕೋಣೆಗಳನ್ನು ಹೆಚ್ಚಿಸುವ ಮೂಲಕ ಯಾತ್ರಾರ್ಥಿಗಳಿಗೆ ಸಹಾಯ ವಾಗುವಂತೆ ಅಲ್ಪಸಂಖ್ಯಾತ ಇಲಾಖೆಯಿಂದ ಅನುದಾನ ಪಡೆದು ಕಾರ್ಯ ನಿರ್ವಹಿಸಲಾಗುವುದು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಊರುಗಳಿಂದ ಆಗಮಿಸಿದ ಜೈನ ಶ್ರಾವಕ ಶ್ರಾವಕಿಯರು ಮಸ್ತಕಾಭಿಷೇಕದ ಪೂರ್ವ ತಯಾರಿ ಕಾರ್ಯಕ್ರಮಗಳು ಸೂಸುತ್ರವಾಗಿ ನಡೆಸಲು ಸೂಕ್ತ ಸಲಹೆ ಸೂಚನೆ ಇತ್ತರು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಮೋಹನ್ ಪಾಡಿವಾಳ್, ಅಂಡಾರ್ ಮಹಾವೀರ್ ಜೈನ್, ಅನಂತ್ ರಾಜ್ ಪೂವಣಿ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಪುಷ್ಪರಾಜ್ ಜೈನ್, ಸುಧೀರ್ ಪಾಡಿವಾಳ್, ರತ್ನಕರ್ ರಾಜ್, ಡಾ. ಜೀವಂದರ್ ಬಲ್ಲಾಳ್ ಕಾಂತಾವರ, ಕೆ.ಸಿ. ಧರಣೆoದ್ರ ಕಳಸ ಉಪಸ್ಥಿತರಿದ್ದರು.
ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.