ಸಹ ಭಜನೆ ಭೋಜನ ಮನೆಗಳಲ್ಲಿ ಇರಲಿ, ಕೌಟುಂಬಿಕ ಸಂಬಂಧಗಳು ವೃದ್ಧಿಯಾಗಲಿ: ಸುರೇಶ್
ಅವರು ಕಟೀಲು ಭಾನುವಾರ ಕಟೀಲು ಮಂಡಲದ ವತಿಯಿಂದ ನಡೆದ ಹಿಂದೂ ಸಂಗಮದಲ್ಲಿ ಮಾತನಾಡಿದರು.
ಭಾಷಣಕ್ಕೆ ಆದರ್ಶದ ಮಾತುಗಳು ಸೀಮಿತವಾಗದೆ ಕಾರ್ಯರೂಪದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಬಳಸದೆ, ಗಿಡಗಳನ್ನು ನೆಟ್ಟು ಪರಿಸರವನ್ನು ಸಹ್ಯ ಸುಂದರವಾಗಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮದು ಎಂದು ಅವರು ಹೇಳಿದರು.
ಭಾರತ ಮಾತೆಯ ಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಾಯಿತು.
ಹಿಂದೂ ಸಂಗಮ ಮೂಲ್ಕಿ ತಾಲೂಕು ಆಯೋಜನೆ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ ಸತ್ಯವನ್ನು ಹೇಳುವಂಥವರಾಗಬೇಕು. ಅಂತಹ ಸಂಸ್ಕಾರ ನಮ್ಮದಾಗಬೇಕು. ಮತ್ತೆ ಮತ್ತೆ ನಾವು ಒಟ್ಟು ಸೇರುತ್ತಾ ಸನಾತನ ಧರ್ಮವನ್ನು ಉಳಿಸುವ ಕಟ್ಟಾಳುಗಳಾಗಬೇಕು ಅದಕ್ಕಾಗಿಯೇ ಅಲ್ಲಲ್ಲಿ ಎಲ್ಲೆಲ್ಲೂ ಹಿಂದೂ ಸಂಗಮಗಳನ್ನು ಸಂಘಟಿಸಲಾಗಿದೆ ಎಂದರು.
ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ಗಿಡಿಗೆರೆ ದೇವಸ್ಥಾನದ ತಿಮ್ಮಪ್ಪ ಮೇಸ್ತ್ರಿ, ದೊಡ್ಡಯ್ಯ ಮೂಲ್ಯ, ಕಿನ್ನಿಗೋಳಿ ರಂಜನಿ ರಾವ್, ಸಂಗಮ ಶ್ರೀವತ್ಸ, ಸಂಪತ್ ಕಾರ್ನಾಡ್, ಪಾರ್ಥಸಾರಥಿ, ಶಶಿಧರ ಶೆಟ್ಟಿ ಕಿಲೆಂಜೂರು, ರಾಧಾಕೃಷ್ಣ ನಾಯಕ್ ಮತ್ತಿತರರಿದ್ದರು.
ಶಶಿಕಲಾ ಕೆಮ್ಮಡೆ ವಂದೇ ಮಾತರಂ, ವೆಂಕಟರಮಣ ಹೆಗಡೆ ವೈಯಕ್ತಿಕ ಗೀತೆ ಹಾಡಿದರು.
ಗುರುರಾಜ್ ಮಲ್ಲಿಗೆಯಂಗಡಿ ಸ್ವಾಗತಿಸಿದರು. ಕೇಶವ ಕರ್ಕೇರ ವಂದಿಸಿ, ಮನು ಕಶ್ಯಪ್ ನಿರೂಪಿಸಿದರು.
ಕಟೀಲು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ದೇಶಪ್ರೇಮದ ನಾಟಕ ಪ್ರದರ್ಶನವಾಯಿತು.
ಸಭಾ ಕಾರ್ಯಕ್ರಮದ ಮೊದಲ ಕಟೀಲು ಪ್ರಥಮ ದರ್ಜೆ ಕಾಲೇಜಿನಿಂದ ಪದವಿಪೂರ್ವ ಕಾಲೇಜುವರೆಗೆ ನಡೆದ ವೈಭವದ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದರು.