ಕೋಟ ಮೂಲದ ಎಚ್.ವಿ. ಹಂದೆಯವರಿಗೆ ಪದ್ಮಶ್ರೀ
Monday, January 26, 2026
ಕುಂದಾಪುರ: ಚೆನ್ನೈಯ ಪ್ರಸಿದ್ದ ಹಂದೆ ಆಸ್ಪತ್ರೆ ಸಂಸ್ಥಾಪಕ ಕೋಟ ಮೂಲದ ಡಾ. ಎಚ್.ವಿ. ಹಂದೆಯವರನ್ನು ಭಾರತ ಸರಕಾರ 2026ರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.
99 ವರ್ಷ ಪ್ರಾಯದ ಡಾ.ಎಚ್.ವಿ. ಹಂದೆಯರು ವೈದ್ಯರಾಗಿಯಲ್ಲದೆ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಇವರ ತಂದೆ ಮಾದಪ್ಪ ಹಂದೆ ವೃತ್ತಿಯಲ್ಲಿ ವಕೀಲರಾಗಿದ್ದು, ಬ್ರಿಟಿಷ್ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಎಚ್.ವಿ. ಹಂದೆಯವರು ತಮಿಳುನಾಡಿನ ಮುಖ್ಯಮಂತ್ರಿ ಎಂಜಿಆರ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿವರ್ಹಿಸಿದ್ದಲ್ಲದೆ; ಎಂಜಿಆರ್ ಅವರ ಅನಾರೋಗ್ಯ ಸಂದರ್ಭ ಸರಕಾರವನ್ನು ಮುನ್ನಡೆಸಿದ್ದರು.
ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿದ ಹಂದೆಯವರು ಕಂಬರಾಮಾಯಣವನ್ನು ಇಂಗ್ಲಿಷ್ ಮತ್ತು ತಮಿಳು ಭಾಷೆಗೆ ಭಾಷಾಂತರಿಸಿದ್ದಾರೆ.