ಮಂಗಳೂರು ರೆಸಾರ್ಟ್‌ನಲ್ಲಿ ತಂಗಿದ್ದ ರಾಜೀವ್‌ಗೌಡ
ಮಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಒಂದು ದಿನಗಳ ಕಾಲ ರೆಸಾರ್ಟ್‌ನಲ್ಲಿ ತೆರಳಿ ಕಾರನ್ನು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಕೇರಳ ಕಡೆಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರೈಲ್ವೇ ನಿಲ್ದಾಣದ ಮುಂಭಾಗ ಆತ ಬಳಸಿದ್ದ ಕಾರು ಪತ್ತೆಯಾಗಿದ್ದು, ಕಾರನ್ನು ಅಲ್ಲಿಯೇ ಬಿಟ್ಟು ಆತ ನಿಲ್ದಾಣದ ಒಳಗೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳೂರಿನಲ್ಲಿ ರೆಸಾರ್ಟ್ ಮಾಲಕನೊಂದಿಗೆ ಕಾರ್‌ನಲ್ಲಿ ರಾಜೀವ ಗೌಡ ತೆರಳಿದ್ದು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ರಾಜೀವ್ ಗೌಡ ಪ್ಲಾನ್ ಮಾಡಿದಂತೆ ಕಾಣುತ್ತಿದೆ. ತನ್ನ ಗುರುತು ಪತ್ತೆಯಾಗದಂತೆ ಮಂಗಳೂರಿಗೆ ತನ್ನ ಸಂಬಂಧಿಗಳ ಕಾರ್‌ನಲ್ಲಿ ರಾಜೀವ್ ಗೌಡ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ಜಂಕ್ಷನ್ ರೈಲ್ವೆ ಸ್ಟೇಷನ್‌ನಲ್ಲಿ ಕಾರ್ ಬಿಟ್ಟು ಕೇರಳದ ಕಡೆ ತೆರಳಿದ್ದು, ರಾಜೀವ್ ಗೌಡನ ಕಾರ್ ಡ್ರೈವರ್ ಕಾರ್ ಅನ್ನು ತೆಗೆದುಕೊಂಡುಹೊಗಿರುವುದಾಗಿ ತಿಳಿದುಬಂದಿದೆ.